ಬಂಟ್ವಾಳ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ಹಾಗೂ ಮಾತೃಭೂಮಿ ಸೇವಾ ಸಂಘ ನಾವೂರು ಇವರ ಜಂಟಿ ಆಶ್ರಯದಲ್ಲಿ,ಸಮಾಜದ ಸಮಾಜಮುಖಿ ಬಂಧುಗಳ ಸಹಕಾರದಿಂದ ದುರಸ್ತಿಗೊಂಡ ಬಂಟ್ಟಾಳ ತಾಲೂಕಿನ ನಾವೂರು ಗ್ರಾಮದ ಸಿಂತಾನಿಕಟ್ಟೆಯ ಶ್ರೀಮತಿ ಅಪ್ಪಿ ಬಡ ಮಹಿಳೆಯ ಮನೆಯ ಹಸ್ತಾಂತರ ಮಾಡಲಾಯಿತು. ಇದನ್ನೂ ಓದಿ : ವಡೋದರಾಕ್ಕೆ ಹೋಗುವ ದಾರಿಯಲ್ಲಿ ತೆಗೆದ ಸೋಮನಾಥ ದೇವಾಲಯದ ಛಾಯಾಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಈ ಸಂದರ್ಭದಲ್ಲಿ ಉದ್ಯಮಿಗಳಾದ ಸಂದೇಶ್ ಶೆಟ್ಟಿ, ಅಖಿಲ ಕರ್ನಾಟಕದ ಮಾಜಿ ಸೈನಿಕರ ಸಂಘ ಬಂಟ್ವಾಳ ಘಟಕದ ಅಧ್ಯಕ್ಷರಾದ ಮೋನಪ್ಪ ಪೂಜಾರಿ ಮೊಗರ್ನಾಡು, ಮಾಜಿ ಸೈನಿಕರಾದ ರಾಮನಾಥ ಶೆಣೈ ಬಂಟ್ವಾಳ, ಐವನ್ ಮೆನೆಂಜಸ್ ಲೊರೊಟ್ಟೊ ಪದವು, ಹರೀಶ್ ಮೈಂದಾಳ,ನಾವೂರು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಫಾರುಕ್,
ಮಾತೃಭೂಮಿ ಸೇವಾ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಜತೆ ಕಾರ್ಯದರ್ಶಿ ವರುಣ್ ಸಂಘಟಕರಾದ ಹರೀಶ್ ಕೆಲ್ಲೆರ್ ಮಾರ್ ಹರ್ಷಿತ್ ಪದವು ಸ್ಥಳೀಯರಾದ ರಮೇಶ್ ಸಿಂತಾನಿಕಟ್ಟೆ,
ಮನೆಯ ಕಾರ್ಯನಿರ್ವಹಿಸಿದ ಬಡಗಿ ಜಗದೀಶ್, ಸಂಘದ ನಿರ್ದೇಶಕರಾದ ಸುರೇಶ್ ಎಸ್ ‌ನಾವೂರು ಮೊದಲಾದವರು ಉಪಸ್ಥಿತರಿದ್ದರು.