ಕಾಡಬೆಟ್ಟು : ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ಕಮಲ ಪೂಜಾರ್ತಿ ಮನೆಯ ಮೇಲ್ಛಾವಣಿ ದುರಸ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡುಬೆಟ್ಟು, ವಗ್ಗ ವತಿಯಿಂದ ಮಾಡಲಾಯಿತು. ಇದನ್ನೂ ಓದಿ : ಹರೀಶ್ ಮಾಂಬಾಡಿ ಸೇರಿದಂತೆ 18 ಮಂದಿಗೆ ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ ಘೋಷಣೆ
ಇದು ಈ ವರ್ಷದಲ್ಲಿ ಕಾಡಬೆಟ್ಟು ವಗ್ಗ ಶೌರ್ಯ ಘಟಕದ 6ನೇ ಮನೆ ದುರಸ್ತಿಯ ಶ್ರಮದಾನವಾಗಿದ್ದು, ಕಮಲ ಪೂಜಾರ್ತಿಯವರು ತೀರಾ ಬಡತನದಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಸಾಸನವನ್ನು ಪಡೆಯುತ್ತಿದ್ದಾರೆ.
ಮನೆಯ ಮೇಲ್ಚಾವಣಿ ರಿಪೇರಿಗೆ ಬೇಕಾದ ಸಲಕರಣೆಗಳನ್ನು ಹಾಗೂ ಊಟ ಉಪಹಾರದ ಪೂರ್ತಿ ವ್ಯವಸ್ಥೆಯನ್ನು ಶೌರ್ಯ ತಂಡದ ಸದಸ್ಯರೇ ಮಾಡಿಕೊಂಡು ಶ್ರಮದಾನ ಮಾಡಿದರು.
ಶ್ರಮದಾನ ಕಾರ್ಯದಲ್ಲಿ ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ ,ಅಶೋಕ ಬೊಲ್ಮಾರ್, ಶಶಿಕಲ, ಪವಿತ್ರ ಅಶೋಕ ಹಾರೊದ್ದು ,ರಮೇಶ್ ಮಹಾಬಲ ರೈ ನಾರಾಯಣಶೆಟ್ಟಿ ,ಮೋಹನಂದ,ರೋಹಿತ್, ಜನಾರ್ಧನ ಹಾಗೂ ಧನು ಪೂಜೆ ಶೌರ್ಯ ಘಟಕದ ಸದಸ್ಯರಾದ ಪ್ರಮೋದ್ ಆಚಾರ್ಯ ಭಾಗವಹಿಸಿದ್ದರು.
ಶ್ರಮದಾನದ ಬಳಿಕ ತಿಂಗಳ ಮಾಸಿಕ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
