ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥದಿಂದ ವಡೋದರಾಕ್ಕೆ ಹೋಗುವ ದಾರಿಯಲ್ಲಿ ತೆಗೆದ ಸೋಮನಾಥ ದೇವಾಲಯದ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.

ಪ್ರಭಾಸ್ ಪಟಾನ್ ತೀರದಲ್ಲಿ, ಸೋಮನಾಥ ದೇವಾಲಯವು ಭಕ್ತಿ, ಇತಿಹಾಸ ಮತ್ತು ನಾಗರಿಕತೆಯ ಉಜ್ವಲ ಸಂಕೇತವಾಗಿ ಎತ್ತರವಾಗಿ ನಿಂತಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಶ್ರೀ ಮೋದಿ ಅವರು ಶಾಶ್ವತ ದೇವಾಲಯವು ಅನಾಗರಿಕ ದಾಳಿಗಳು, ಆಕ್ರಮಣಗಳು ಮತ್ತು ಶತಮಾನಗಳ ಹಾದಿಯನ್ನು ಮೀರಿ ನಿಂತಿದೆ ಎಂದು ವಿವರಿಸಿದರು.  ಇದನ್ನೂ ಓದಿ : ಹರೀಶ್ ಮಾಂಬಾಡಿ ಸೇರಿದಂತೆ 18 ಮಂದಿಗೆ ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ ಘೋಷಣೆ

ಸೋಮನಾಥವು ಪ್ರತಿಯೊಬ್ಬ ಭಾರತೀಯರಿಗೂ ಶಕ್ತಿ, ಧೈರ್ಯ ಮತ್ತು ಭರವಸೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಈ ಕುರಿತ ಎಕ್ಸ್‌ ತಾಣದ ಸರಣಿ ಸಂದೇಶಗಳಲ್ಲಿ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ:

“ಸೋಮನಾಥದಿಂದ ವಡೋದರಾಗೆ ಹೋಗುವ ದಾರಿಯಲ್ಲಿ ಈ ಛಾಯಾಚಿತ್ರಗಳನ್ನು ತೆಗೆದೆ…

ಪ್ರಭಾಸ್ ಪಟಾನ್ ತೀರದಲ್ಲಿ, ಸೋಮನಾಥ ದೇವಾಲಯವು ಭಕ್ತಿ, ಇತಿಹಾಸ ಮತ್ತು ನಾಗರಿಕತೆಯ ಚೈತನ್ಯದ ಉಜ್ವಲ ಸಂಕೇತವಾಗಿ ಎತ್ತರವಾಗಿ ನಿಂತಿದೆ. ಇದು ಅನಾಗರಿಕ ದಾಳಿಗಳು, ಆಕ್ರಮಣಗಳು ಮತ್ತು ಶತಮಾನಗಳ ಗತಿಯನ್ನು ಮೀರಿಸಿದೆ. ಇದು ಶಾಶ್ವತವಾಗಿದೆ. ಸೋಮನಾಥವು ಪ್ರತಿಯೊಬ್ಬ ಭಾರತೀಯರಿಗೂ ಶಕ್ತಿ, ಧೈರ್ಯ ಮತ್ತು ಭರವಸೆಯನ್ನು ನೀಡುತ್ತದೆ.

ಹರಹರ ಮಹಾದೇವ!”