ಮೈಸೂರು: ನಟ ದರ್ಶನ್  ಮೈಸೂರಿನ ಮನೆ ಹಾಗೂ ಫಾರ್ಮ್‌ ಹೌಸ್‌ನಲ್ಲಿ ಕುಟುಂಬಸ್ಥರ ಜೊತೆ ಸೇರಿ ಚಾಮುಂಡಿ ತಾಯಿ ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ : ಮಂಗಳೂರು : ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

ಎರಡನೇ ಆಷಾಡದ ಶುಕ್ರವಾರ ಹಿನ್ನಲೆ ಕುಟುಂಬಸ್ಥರ ಜೊತೆಯಲ್ಲಿ ಪೂಜೆ ನೆರವೇರಿಸಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಹಬ್ಬ ಮಾಡುವ ನಟ ದರ್ಶನ್, ಈ ಭಾರಿ ಕುಟುಂಬಸ್ಥರು ಜೊತೆಯಲ್ಲಿ ಚಾಮುಂಡಿ ತಾಯಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಮೈಸೂರಿನ ಸಿದ್ಧಾರ್ಥ ಲೇಔಟ್‌ನಲ್ಲಿ ನಿವಾಸದಲ್ಲಿ ತಾಯಿ ಮೀನಾ ತೂಗುದೀಪ, ಪತ್ನಿ ಹಾಗೂ ಸಹೋದರೊಂದಿಗೆ ಪೂಜೆ ನೆರವೇರಿಸಿದ್ದಾರೆ. ಪ್ರತಿ ವರ್ಷ ಸ್ನೇಹಿತರ ಜೊತೆ ಫಾರಂ ಹೌಸ್‌ನಲ್ಲಿ ಚಾಮುಂಡಿ ಹಬ್ಬ ಮಾಡುತ್ತಿದ್ದರು. ಈ ಬಾರಿ ಚಾಮುಂಡಿ ಬೆಟ್ಟಕ್ಕೆ ಕುಟುಂಬಸ್ಥರ ಜೊತೆ ಬಂದು ಪೂಜೆ ನೆರವೇರಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜಾಮೀನಿನ ಮೇಲಿರುವ ದರ್ಶನ್‌ಗೆ, ಇತ್ತೀಚೆಗೆ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಹೆಚ್ ಕೋರ್ಟ್ ಅನುಮತಿ ನೀಡಿತ್ತು. ಜೂನ್ 1ರಿಂದ 25ರವರೆಗೆ ಡೆವಿಲ್ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿತ್ತು.