ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ. ) ಬಂಟ್ವಾಳ ತಾಲೂಕಿನ ಯೋಜನ ಕಚೇರಿ ವ್ಯಾಪ್ತಿಯಲ್ಲಿ ಈ ವರ್ಷ ಸುಮಾರು ಒಂದು ಸಾವಿರ ಮಂದಿ ವಿದ್ಯಾರ್ಥಿಗಳು ಒಲಿಂಪಿಯಡ್ ಪರೀಕ್ಷೆ ನೋಂದಾವಣೆಯ ಗುರಿ ನೀಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹೇಳಿದರು.
ಅವರು ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸಭಾಂಗಣದಲ್ಲಿ ನಡೆದ ಸಿ ಎಸ್ ಸಿ ಕೇಂದ್ರಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಒಂದರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಅನುಷ್ಠಾನಕ್ಕೆ ಒಳಪಡುವ ಒಲಿಂಪಿಯಡ್ ಪರೀಕ್ಷೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ ಎಸ್ ಸಿ ಕೇಂದ್ರಗಳಲ್ಲಿ ನೊಂದವಣಿ ಮಾಡಲಾಗುತ್ತಿದ್ದು ಕಳೆದ ವರ್ಷ ಒಲಿಂಪಿಯಡ್ 6.0 ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 384 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದರು.ಈ ವರ್ಷ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು ಈ ಒಲಿಂಪಿಯಡ್ ಪರೀಕ್ಷೆಯಲ್ಲಿ ರಾಂಕ್ ಬಂದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು 30000 ವರೆಗೆ ಸ್ಕಾಲರ್ ಶಿಪ್ ಹಾಗೂ ಪಾಸ್ ಆದ ವಿದ್ಯಾರ್ಥಿಗಳಿಗೆ
ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.
ಇದರ ಜೊತೆಗೆ ಸಿ ಎಸ್ ಸಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ , ಪಾಸ್ ಪೋರ್ಟ್,ವಾಹನಗಳ ವಿಮೆ ,ಪಾನ್ ಕಾರ್ಡ್, ರಾಷ್ಟ್ರೀಯ ಪಿಂಚಣಿ ಯೋಜನೆ, ಮೊಬೈಲ್ ರೀಚಾರ್ಜ್ ,ವಿದ್ಯುತ್ ಬಿಲ್ ಪಾವತಿ ,ಫಾಸ್ಟ್ ಟ್ಯಾಗ್ ರಿಚಾರ್ಜ್, ಸಿಪಿ ಗ್ರಾಮ ಇನ್ನೂ ಅನೇಕ ಸರ್ಕಾರದ ಸೇವೆಗಳನ್ನು ಯೋಜನೆಯ ಗ್ರಾಮೀಣ ಮಟ್ಟದ ಸಿ ಎಸ್ ಸಿ ಕೇಂದ್ರದಲ್ಲಿ ಮಾಡಲಾಗುತ್ತಿದ್ದು ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ,ತಾಲೂಕು ಯೋಜನಾಧಿಕಾರಿ ಜಯನಂದ ಪಿ,ತಾಲೂಕ್ ನೋಡಲ್ ಪ್ರತಾಪ್, ತಾಲೂಕಿನ ಎಲ್ಲಾ ವಿ ಎಲ್ ಇ ಗಳು , ಉಪಸ್ಥಿತರಿದ್ದರು.
