ಚೆನ್ನೈ: ತಮಿಳುನಾಡು ರಾಜ್ಯಪಾಲರ 4ನೇ ಭೇಟಿ ಕೊನೆಗೂ ಫಲಪ್ರದವಾಗಿದ್ದು, ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಇದನ್ನೂ ಓದಿ : ಚೀನಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 21 ಮಂದಿ ದಾರುಣ ಸಾವು, 61 ಜನಕ್ಕೆ ಗಾಯ
ಸರಳ ಬಹುಮತ ಪಡೆದ ವಿಜಯ್ ಸಂಜೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದರು. ಮೊದಲಿಗೆ ಆಗಲ್ಲ ಎಂದಿದ್ದ ರಾಜ್ಯಪಾಲರು ನಂತರ ಒಪ್ಪಿಗೆ ಸೂಚಿಸಿದರು. ಕೇರಳಕ್ಕೆ ನಿಗದಿತ ವಿಮಾನವನ್ನು ರಾಜ್ಯಪಾಲ ಆರ್.ವಿ. ಅರ್ಲೇಕರ್ ರದ್ದುಗೊಳಿಸಿ ವಿಜಯ್ ಭೇಟಿಗೆ ತಿಳಿಸಿದರು. ನಂತರ ಟಿವಿಕೆ ನಾಯಕ ವಿಜಯ್, ರಾಜ್ಯಪಾಲರನ್ನು ನಾಲ್ಕನೇ ಬಾರಿಗೆ ಭೇಟಿ ಮಾಡಿದರು.
ಬಳಿಕ ವಿಜಯ್ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಶಾಲು ಹೊದಿಸಿ, ಹೂಗುಚ್ಛ ನೀಡಿದರು. ಬಳಿಕ ಶಾಸಕರ ಬೆಂಬಲ ಪತ್ರ, 120 ಶಾಸಕರ ಪಟ್ಟಿ ಕೊಟ್ಟು ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದರು. ವಿಜಯ್‌ಗೆ ಬೆನ್ನು ತಟ್ಟಿ ರಾಜ್ಯಪಾಲರು ಆಲ್ ದಿ ಬೆಸ್ಟ್ ಹೇಳಿದರು.
ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಬೆಂಬಲದೊಂದಿಗೆ, 121 ಶಾಸಕರು ಈಗ ಟಿವಿಕೆ ಬೆಂಬಲಕ್ಕೆ ನಿಂತಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸುವ ಟಿವಿಕೆ ಹಾದಿ ಈಗ ಸ್ಪಷ್ಟವಾಗಿದೆ.
