ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ  ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ‘ಯಕ್ಷಾಮೃತ’ ಯಕ್ಷಗಾನ ತರಗತಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳು ಶ್ರೀರಾಮನಿಗೆ ದೀಪಬೆಳಗಿಸುವುದರ ಮೂಲಕ ಯಕ್ಷ ಶಿಕ್ಷಣ ತರಗತಿಯನ್ನು  ಉದ್ಘಾಟಿಸಿದರು. ಇದನ್ನೂ ಓದಿ : ಫಾರ್ಮ್‌ ಹೌಸ್‌ನಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ದರ್ಶನ್
ಕಟೀಲು ಮೇಳದ ಪ್ರಧಾನ ವೇಷಧಾರಿಯಾದ ಅಶ್ವತ್ ಮಂಜನಾಡಿ ಅವರ ಉದ್ಘಾಟನಾ ಮಾತುಗಳಲ್ಲಿ, “ ವಿದ್ಯೆ ಮತ್ತು ಸಂಸ್ಕಾರದಲ್ಲಿ ವಿದ್ಯೆ ಉದ್ಯೋಗಕ್ಕಾಗಿ ಹಾಗೂ ಸಂಸ್ಕಾರವು ಜೀವನಕ್ಕಾಗಿ, ಮೊದಲು ಸಂಸ್ಕಾರ ನಂತರ ವಿದ್ಯೆ, ಸೇವೆ, ಸಂಸ್ಕಾರ, ತ್ಯಾಗದಿಂದ ಜೀವನದಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯ, ಯಕ್ಷಗಾನದಿಂದ ದೇಹಕ್ಕೆಆರೋಗ್ಯ-ವ್ಯಾಯಾಮ, ಜ್ಞಾನ-ನೆನಪು ಶಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಯಕ್ಷಗಾನವುಮಾತು, ಕುಣಿತ, ಅಭಿನಯ ಅಭಿವ್ಯಕ್ತಿಯನ್ನು ಒಳಗೊಂಡ ಒಂದು ಶ್ರೀಮಂತ ಕಲೆ, ಈ ಕಲೆಯಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡು ಉತ್ತಮರಾಗಿ ಬಾಳಿ.”ಎಂದು ಹಾರೈಸಿದರು.
ಶ್ರೀ ಉಮಾಶಿವ ಕ್ಷೇತ್ರ ಗೇರುಕಟ್ಟೆ ಕಲ್ಲಡ್ಕಇದರ ಧರ್ಮದರ್ಶಿಗಳು, ಶ್ರೀರಾಮ ಸೌಹಾರ್ದ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು, ನಿವೃತ್ತ ಬಿ.ಎಸ್.ನಲ್‌ ಉದ್ಯೋಗಿ ರಾಕೋಡಿ ಈಶ್ವರ್ ಭಟ್ ಮಾತನಾಡಿ, “ ಈ ಸಂಸ್ಥೆಯು ಉತ್ತಮ ಸಂಸ್ಕಾರ ಶಿಕ್ಷಣ ನೀಡುವ ಸಂಸ್ಥೆ, ಇಂತಹ ಸಾಮೂಹಿಕ ಹುಟ್ಟುಹಬ್ಬಸಂಸ್ಕಾರಕ್ಕೆ ಒಂದು ಪ್ರೇರಣೆ, ಹಾಗೆಯೇ ಯಕ್ಷಗಾನವು ನಮ್ಮ ಭಾರತೀಯ ಕಲೆಯನ್ನು ಪ್ರದರ್ಶಿಸುವ ಒಂದು ಉತ್ತಮ ಕಲೆ ಇದರ ಸದುಪಯೋಗ ಪಡೆದುಕೊಳ್ಳಿ, ಅಂತೆಯೇ ಉತ್ತಮ ಪ್ರಜೆಗಳಾಗಿ ನಾಗರಿಕರಾಗಿ ಬದುಕಿ ಬಾಳಿ.” ಎಂದು ಹಿತ ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿಸಂಚಾಲಕರು ಬಂಟ್ವಾಳ ವಿಧಾನ ಸಭಾಕ್ಷೇತ್ರದ ಸಹಕಾರಿ ಪ್ರಕೋಷ್ಠ ಜಯರಾಮ್‌ ರೈ ಬೋಳಂತೂರು, ಅಧ್ಯಕ್ಷರು ವಿಟ್ಲಪಡ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಕುಳ್ಯಾರು ನಾರಾಯಣ ಶೆಟ್ಟಿ, ಸ್ಥಾಪಕರು ಡ್ರೀಮ್‌ ಕಿಟ್‌ರೋಬೋಟಿಕ್ ಸಂಸ್ಥೆಯ ಆಶಿಷ್, ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಧನ್ಯಶ್ರೀ ಸ್ವಾಗತಿಸಿ, ಚಾರಿತ್ರö್ಯ ನಿರೂಪಿಸಿ ವೈದೇಹಿ ವಂದಿಸಿದರು. ಅಧ್ಯಾಪಕರಾದ ಸುಮಂತ್ ಆಳ್ವ, ರೂಪಕಲಾ, ಬಾಲಕೃಷ್ಣಂ ಸುಮಿತ್ರಾ, ಚಂದ್ರಕಲಾ ಅವರು ಸಹಕರಿಸಿದರು.