ನಾರಾಯಣಗುರುಗಳು ಇಡೀ ಜಗತ್ತನ್ನು ತನ್ನತ್ತ ಸೆಳದ ದಾರ್ಶನಿಕ..ನಾಗೇಶ್ ಅಮೀನ್ ಮುಲ್ಲಕಾಡು

ಬಂಟ್ವಾಳ : ಒಬ್ಬ ಪ್ರಜ್ಞಾವಂತ ವ್ಯಕ್ತಿಯಾಗಿ ತನ್ನ ನಿರ್ಧಾರಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನುಡಿದಂತೆ ನಡೆದು, ಕ್ರೀಯಾಶೀಲ ಚಟುವಟಿಕೆಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡು, ಎಲ್ಲರ ಸ್ವಾಭಿಮಾನವನ್ನು ಜಾಗೃತವಾಗಿಸಿ, ಸಮಾಜ ಸುಧಾರಕರಾಗಿ ರೂಪುಗೊಂಡು, ಕೇರಳದಂತಹ ರಾಜ್ಯದಲ್ಲಿ ತನ್ನಲ್ಲಿರುವ ಜ್ಞಾನದ ಬಲದಿಂದ ಇಡೀ ಜಗತ್ತನ್ನು ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಯುವವಾಹಿನಿ ಮಂಗಳೂರು ಘಟಕದ ಮಾಜಿ ಅಧ್ಯಕ್ಷ ನಾಗೇಶ್ ಅಮೀನ್ ಮುಲ್ಲಕಾಡು ತಿಳಿಸಿದರು.  ಇದನ್ನೂ ಓದಿ : ಮಂಗಳೂರು : ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಬೊಳಿಯಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆದ
ಗುರುತತ್ವವಾಹಿನಿ ಭಜನಾ ಸಂಕೀರ್ತನೆ 51 ರಲ್ಲಿ ಗುರುಸಂದೇಶ

ಅವರು ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಬೊಳಿಯಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆದ
ಗುರುತತ್ವವಾಹಿನಿ ಭಜನಾ ಸಂಕೀರ್ತನೆ 51 ರಲ್ಲಿ ಗುರುಸಂದೇಶ ನೀಡಿದರು.

ಕಳೆದ ಸಾಲಿನ ಯಶಸ್ವೀ ಕಾರ್ಯಕ್ರಮ ಗುರುತತ್ವವಾಹಿನಿ ಈ ವರ್ಷವೂ ಮುಂದುವರಿಯುವುದು ಸಂತಸ ತಂದಿದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದರು.

2025-26ನೇ ಸಾಲಿನ ಪ್ರಥಮ ಗುರುತತ್ವವಾಹಿನಿ ಭಜನಾ ಸಂಕೀರ್ತನೆ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಯುವವಾಹಿನಿಗೆ ಮತ್ತಷ್ಟು ಸ್ಪೂರ್ತಿ ನೀಡಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ತಿಳಿಸಿದರು.

ಈ ಸಂದರ್ಭದಲ್ಲಿ
ಬೊಳಿಯಾರು ನಾರಾಯಣಗುರು ಮಂದಿರದ ಅಧ್ಯಕ್ಷ ಗಣೇಶ್ ಬೊಳ್ಯಾರು ಹಾಗೂ ಸಂಘದ ಸದಸ್ಯರು, ವಸುಧೈವ ಭಜನಾ ಕುಟುಂಬದ ಹಿರಿಯ ಭಜಕರಾದ ರವಿ ಮಂಜನಾಡಿ, ಭಜಕರಾದ ವಿನಯ್ ಆಚಾರ್ಯ, ಅಮ್ಟೂರು ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರು, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೆಲು, ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ, ಉಪಾಧ್ಯಕ್ಷರಾದ ಕಿರಣ್ ಪೂಂಜರಕೋಡಿ ಹಾಗೂ ನಿಕೇಶ್ ಕೊಟ್ಯಾನ್ ಕಾರ್ಯದರ್ಶಿ ಮಧುಸೂದನ್ ಮಧ್ವ, ಮಹೇಶ್ ಬೊಳ್ಳಾಯಿ, ಉದಯ ಮೇನಾಡು, ಶೈಲೇಶ್ ಕುಚ್ಚಿಗುಡ್ಡೆ, ಸುನಿತಾ ನಿತಿನ್ ಮಾರ್ನಬೈಲ್, ಯಶೋಧರ ಕಡಂಬಳಿಕೆ, ಚಿನ್ನಾ ಕಲ್ಲಡ್ಕ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ , ರಾಜೇಶ್ ಸುವರ್ಣ, ಅರುಣ್ ಮಹಾಕಾಳಿಬೆಟ್ಟು, ಶಿವಾನಂದ ಎಂ, ಸದಸ್ಯರಾದ ಸುನಿಲ್ ಮರ್ದೋಲಿ, ಸುದೀಪ್ ರಾಯಿ, ಪ್ರಶಾಂತ್ ಏರಮಲೆ, ಭವಾನಿ ಅಮೀನ್, ನವೀನ್ ಪೂಜಾರಿ ಕಾರಜೆ, ಯತೀಶ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಸಂಕೀರ್ತನೆಯಲ್ಲಿ ಹಾರ್ಮೋನಿಯಂ ವಾದಕರಾಗಿ ರಾಜೇಶ್ ಅಮ್ಟೂರು ಮತ್ತು ತಬಲಾದಲ್ಲಿ ಸಾತ್ವಿಕ್ ದೇರಾಜೆ, ಪೃತ್ವಿಕ್ ಬೊಳ್ಯಾರು ಸಹಕರಿಸಿದರು.

ಸಮಾಜ ಸೇವಾ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.