ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಸುಳ್ಯ : ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

Posted by Bantwala Isiri News | Jan 6, 2026 | ಬಂಟ್ವಾಳ | 0 |

ಸುಳ್ಯ : ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

ಮಂಗಳೂರು: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವುದು ಸುಳ್ಯದ (Sullia) ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಅಮೆರಿಕ ದಾಳಿ – 40 ಮಂದಿ ನಾಗರಿಕರು ಸಾವು

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮಗು ಧನ್ವಿ (3) ಮೃತರು ಎಂದು ಗುರುತಿಸಲಾಗಿದೆ. ಹರೀಶ್ ಅವರು ತನ್ನ ತಾಯಿ, ಪತ್ನಿ, ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದರು. ರಾತ್ರಿ ಮನೆಯವರೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿ ಮಲಗಿದ್ದ ಮಧುಶ್ರೀ, ಬೆಳಗ್ಗೆ ಮಗು ಸಹಿತ ಕಾಣದೇ ಇದ್ದ ವೇಳೆ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಹುಡುಕಾಟದ ವೇಳೆ ಮನೆ ಸಮೀಪದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ.

ಮಧುಶ್ರೀ ಅವರು ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾದ ಮಧುಶ್ರೀ ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಧುಶ್ರೀ ಅವರು ಕೆರೆಗೆ ಹಾರುವ ಮೊದಲು ಮಗುವಿನೊಂದಿಗೆ ಸಾಯಲು ನಿರ್ಧರಿಸಿ ತನ್ನ ಸೊಂಟಕ್ಕೆ ಮಗುವನ್ನು ಬಟ್ಟೆಯಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ. ಕೆರೆಯಲ್ಲಿ ಮೃತದೇಹ ಪತ್ತೆಯಾದಾಗ ಮಗು ತಾಯಿಯನ್ನು ಅಪ್ಪಿಕೊಂಡ ರೀತಿಯಲ್ಲೇ ಪತ್ತೆಯಾಗಿದೆ. ಮಗಳ ಸಾವಿನಲ್ಲಿ ಅನುಮಾನ ಇದೆ ಎಂದು ಮಧುಶ್ರೀ ತಾಯಿ ರತ್ನಾವತಿ ದೂರು ನೀಡಿದ್ದಾರೆ.

ಬೆಳ್ಳಾರೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಆತ್ಮಹತ್ಯೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share:

Rate:

Previousನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು, ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯ ಕ್ರಮ
Nextಮೈಸೂರು ಜಿಲ್ಲಾ ಕುಂಬಾರ ಸಂಘ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ವಿಟ್ಲ : ನೂತನ ಯೋಜನಾಧಿಕಾರಿಯಾಗಿ ಸುರೇಶ್ ಗೌಡ ಅಧಿಕಾರ ಸ್ವೀಕಾರ

ವಿಟ್ಲ : ನೂತನ ಯೋಜನಾಧಿಕಾರಿಯಾಗಿ ಸುರೇಶ್ ಗೌಡ ಅಧಿಕಾರ ಸ್ವೀಕಾರ

27 April 2025

ವೀರಕಂಬ ಗ್ರಾಮ ಪಂಚಾಯತ್ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆ

ವೀರಕಂಬ ಗ್ರಾಮ ಪಂಚಾಯತ್ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆ

17 July 2025

15,000 ರೂ. ಸಹಾಯಧನ ವಿತರಣೆ

15,000 ರೂ. ಸಹಾಯಧನ ವಿತರಣೆ

8 September 2024

ನೋಡನೋಡುತ್ತಲೇ ಏಕಾಏಕಿ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

ನೋಡನೋಡುತ್ತಲೇ ಏಕಾಏಕಿ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

24 June 2025

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಇಂದು ವಿಧಾನಸೌಧದಲ್ಲಿ ಸಮಾಲೋಚನಾ ಸಭೆ
    ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಇಂದು ವಿಧಾನಸೌಧದಲ್ಲಿ ಸಮಾಲೋಚನಾ ಸಭೆ
  • ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಜಾಗೃತಿ ಅಭಿಯಾನ
    ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಜಾಗೃತಿ ಅಭಿಯಾನ
  • ಲಂಡನ್ ಸಮೀಪ ಎರಡು ರೈಲುಗಳ ನಡುವೆ ಡಿಕ್ಕಿ – ಚಾಲಕ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
    ಲಂಡನ್ ಸಮೀಪ ಎರಡು ರೈಲುಗಳ ನಡುವೆ ಡಿಕ್ಕಿ – ಚಾಲಕ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
  • ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ – ಪತಿಯಿಂದ ವ್ಯಕ್ತಿಯ ಬರ್ಬರ ಹತ್ಯೆ
    ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ – ಪತಿಯಿಂದ ವ್ಯಕ್ತಿಯ ಬರ್ಬರ ಹತ್ಯೆ
  • ಪಿಎಂ ಕಿಸಾನ್ ಸಮ್ಮಾನ್ ನಿಧಿಯ 23ನೇ ಕಂತು ಇಂದು ಬಿಡುಗಡೆ – ಅರ್ಹ ರೈತರ ಖಾತೆಗೆ 18,880 ಕೋಟಿ ಹಣ ಜಮೆ
    ಪಿಎಂ ಕಿಸಾನ್ ಸಮ್ಮಾನ್ ನಿಧಿಯ 23ನೇ ಕಂತು ಇಂದು ಬಿಡುಗಡೆ – ಅರ್ಹ ರೈತರ ಖಾತೆಗೆ 18,880 ಕೋಟಿ ಹಣ ಜಮೆ
  • ಭಟ್ಕಳದಲ್ಲಿ ಲವ್ ಜಿಹಾದ್ ಆರೋಪ – ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಮುಸ್ಲಿಂ ಯುವಕ ಅರೆಸ್ಟ್‌
    ಭಟ್ಕಳದಲ್ಲಿ ಲವ್ ಜಿಹಾದ್ ಆರೋಪ – ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಮುಸ್ಲಿಂ ಯುವಕ ಅರೆಸ್ಟ್‌
  • ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬೊಲೆರೋ – 7 ಮಂದಿ ಸ್ಥಳದಲ್ಲೇ ಸಾವು
    ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬೊಲೆರೋ – 7 ಮಂದಿ ಸ್ಥಳದಲ್ಲೇ ಸಾವು
  • ಕಡೇಶಿವಾಲಯ ದಾದುಕೋಡಿ ಸಂಪೋಳಿ ರಸ್ತೆ ಕಾಂಕ್ರೆಟಿಕರಣಕ್ಕೆ ಗುದ್ದಲಿ ಪೂಜೆ
    ಕಡೇಶಿವಾಲಯ ದಾದುಕೋಡಿ ಸಂಪೋಳಿ ರಸ್ತೆ ಕಾಂಕ್ರೆಟಿಕರಣಕ್ಕೆ ಗುದ್ದಲಿ ಪೂಜೆ
  • ಸೃಜನೋತ್ಸವದ 2026 ರ ಸಂಭ್ರಮದಲ್ಲಿ ಯುವ ವೃಕ್ಷೋತ್ಸವಕ್ಕೆ ವಿನೂತನ ಸ್ಪರ್ಶ
    ಸೃಜನೋತ್ಸವದ 2026 ರ ಸಂಭ್ರಮದಲ್ಲಿ ಯುವ ವೃಕ್ಷೋತ್ಸವಕ್ಕೆ ವಿನೂತನ ಸ್ಪರ್ಶ
  • ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ
    ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ

Designed by Elegant Themes | Powered by WordPress

error: Content is protected !!