ಕೇರಳ (Keralam) ಮೂಲದ ವೈದೇಹಿ ಹಲ್ಲೆ ನಡೆಸಿದ ಯುವತಿ. ಟೀ ಕುಡಿದ ಕಪ್ ರಸ್ತೆ ಬದಿಯಲ್ಲಿ ಎಸೆಯ ಬೇಡಿ, ಕಸದ ಬುಟ್ಟಿಗೆ ಹಾಕಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಮಹಿಳೆ ಕಲ್ಲು ಎಸೆದಿದ್ದಾಳೆ. ಅಲ್ಲದೇ ಅವಾಚ್ಯ ಶಬ್ದ ಹಾಗೂ ಕೈ ಸನ್ನೆ ಮಾಡಿದ್ದಾಳೆ.
ಯುವತಿ ತನ್ನ ಗೆಳೆಯನ ಜೊತೆಗೆ ರಸ್ತೆ ಬದಿಯಲ್ಲಿ ಟೀ ಕುಡಿಯುತ್ತಿದ್ದಳು. ಈ ವೇಳೆ ಟೀ ಕಪ್ನ್ನು ರಸ್ತೆಗೆ ಎಸೆಯ ಬೇಡಿ, ಕಸದ ಬುಟ್ಟಿಗೆ ಹಾಕಿ ಎಂದು ಸ್ವಚ್ಚತಾ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾಗಿ ಪೌರಕಾರ್ಮಿಕನ ಮೇಲೆ ಯುವತಿ ಕಲ್ಲು ಎಸೆದಿದ್ದಾಳೆ.
ಇದನ್ನೂ ಓದಿ: ಬಳ್ಳಾರಿ ಚಲೋ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರ ಭಾಗಿ
ಬೆಳ್ಳಂ ಬೆಳಗ್ಗೆ ಯುವತಿ ನಶೆಯಲ್ಲಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೌರಕಾರ್ಮಿಕನ ದೂರಿನ ಮೇರೆಗೆ ಯುವಕ ಹಾಗೂ ಯುವತಿಯನ್ನು ವೈಟ್ಫೀಲ್ಡ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.