ರಾಯಚೂರು: ಬುಲೆರೋ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ 8 ಜನ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರದ (Andhra Pradesh) ಕರ್ನೂಲ್ (Kurnool) ಜಿಲ್ಲೆಯ ಮಂತ್ರಾಲಯ (Mantralaya) ಬಳಿಯ ಚಿಲಕನಡೋಣ ಬಳಿ ನಡೆದಿದೆ. ಇದನ್ನೂ ಓದಿ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಟಿಕ – ಬಾಳ್ತಿಲ ಮಕ್ಕಳ ಸಾಂಸ್ಕೃತಿಕ ಕಲರವ 2026 ಹಾಗೂ ಯಕ್ಷಗಾನ – “ಶ್ರೀದೇವಿ ವೈಷ್ಣವಿ ಮಹಾತ್ಮೆ”

ಹಾಸನ, ಚಿಕ್ಕಮಗಳೂರು ಮೂಲದ  ಕುಮಾರ್ (50), ದೀಪಿಕಾ (42) , ಸುನಿಲ್ (40) ಯಶೋಧಮ್ಮ (60),  ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಹಾಗೂ ಮೀನಾಕ್ಷಿ ಮೃತರು.

ಇಂದು (ಏ.16) ಜಾವ 4 ಗಂಟೆ ಸುಮಾರಿಗೆ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಈ ವೇಳೆ ಮಂತ್ರಾಲಯಕ್ಕೆ ಹೋಗುತ್ತಿದ್ದ ಬುಲೆರೋ ವಾಹನಕ್ಕೆ ಬೀದರ್‌ನಿಂದ ತುಮಕೂರಿಗೆ ಹೋಗುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 8 ಜನ ಸಾವನ್ನಪ್ಪಿದ್ದಾರೆ.

ಇನ್ನುಳಿದ ಗಾಯಾಳುಗಳನ್ನು ಕರ್ನೂಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.