ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಬಳಕೆದಾರರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇಲ್ಲದೇ ಹೋದರೆ ನಿಮಗೆ ಗ್ಯಾಸ್​ ಸಬ್ಸಿಡಿ ಸಿಗುವುದಿಲ್ಲ. ಕೆವೈಸಿ ಮಾಡಲು ಜೂನ್​ 30 ಕೊನೆಯ ದಿನವಾಗಿದೆ. ಇದಾಗಲೇ ಎಲ್ಲಾ ಗ್ರಾಹಕರ ಮೊಬೈಲ್​ಗೂ ಈ ಸಂದೇಶ ಕಳುಹಿಸಲಾಗಿದೆ. ಒಂದು ವೇಳೆ ಇದೇ 30ರ ಒಳಗೆ ಇ-ಕೆವೈಸಿ ಮಾಡದೇ ಹೋದರೆ ನಿಮಗೆ ಸಿಗುವ ಗ್ಯಾಸ್​ ಸಬ್ಸಿಡಿ ಕಟ್​ ಆಗಲಿದೆ. ಆದ್ದರಿಂದ ಆಧಾರ್ ಆಧರಿತ ದೃಢೀಕರಣ ಮಾಡಿಸುವುದು ಕಡ್ಡಾಯವಾಗಿದೆ.  ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್: ಈ ದಿನದಂದು ಬರಲಿದೆ PM Kisan ಯೋಜನೆಯ 2 ಸಾವಿರ ರೂಪಾಯಿ ಹಣ

ನೀವು ನಿಗದಿತ ಅವಧಿಯ ಒಳಗೆ ಆಧಾರ್ ವೆರಿಫಿಕೇಶನ್ ಮಾಡಿಸದಿದ್ದರೆ ಜುಲೈ 1ರಿಂದ ಸಬ್ಸಿಡಿ ಪ್ರಯೋಜನಗಳು ಸ್ಥಗಿತಗೊಳ್ಳಬಹುದು. ಗ್ಯಾಸ್​ ಸಿಲಿಂಡರ್​ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದ್ದರೆ ಮತ್ತೆ ಚಿಂತೆ ಮಾಡುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಮತ್ತು ಇತರ ಸಬ್ಸಿಡಿ ಪಡೆಯುವ ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮತ್ತು ವೆರಿಫಿಕೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ನಿಮ್ಮ ಗ್ಯಾಸ್​ ಸಿಲಿಂಡರ್​ಗೆ ಇ- ಕೆವೈಸಿ ಆಗಿದೆಯೇ, ಇಲ್ಲವೇ ಎನ್ನುವುದನ್ನು ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್​ ಮೂಲಕ ಅಥವಾ ತಮ್ಮ ಹತ್ತಿರದ ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಖಾತೆಯ ವಿವರಗಳನ್ನು ಪರಿಶೀಲಿಸಬಹುದು. ಒಂದು ವೇಳೆ ಇ-ಕೆವೈಸಿ ಆಗದೇ ಇದ್ದರೆ ಅದನ್ನು ಮಾಡುವುದು ಹೀಗೆ:

ಎಚ್‌ಪಿ ಗ್ಯಾಸ್ (HP Gas) ಇ-ಕೆವೈಸಿ ವಿಧಾನ:

– ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ HP Pay ಆಪ್ ಡೌನ್‌ಲೋಡ್ ಮಾಡಿ.

– ನಿಮ್ಮ ಎಲ್‌ಪಿಜಿ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬಳಸಿ ರಿಜಿಸ್ಟರ್ ಮಾಡಿ.

– OTP ಪರಿಶೀಲಿಸಿ, ನಿಮ್ಮ ಭದ್ರತೆಗಾಗಿ MPIN ಅನ್ನು ಸೆಟ್ ಮಾಡಿ.

– ಆಪ್‌ನಲ್ಲಿನ ‘MY HP’ ಅಡಿಯಲ್ಲಿ ಇರುವ ಎಲ್‌ಪಿಜಿ (LPG) ಸೆಕ್ಷನ್ ತೆರೆಯಿರಿ.

– ‘e-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

-ನಿಯಮ ಮತ್ತು ಷರತ್ತುಗಳನ್ನು ಸ್ವೀಕರಿಸಿ, ಆಧಾರ್ ಫೇಸ್ ಅಥೆಂಟಿಕೇಶನ್ ಮುಗಿಸಿ ಸಬ್ಮಿಟ್ ನೀಡಿ.

ಇಂಡೇನ್ ಗ್ಯಾಸ್ ಇ-ಕೆವೈಸಿ ( Indane Gas E-KYC )

– IndianOil ONE App ಡೌನ್‌ಲೋಡ್ ಮಾಡಿ.

– ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಿಕೊಳ್ಳಿ.

-ನಿಮ್ಮ 16 ಅಂಕಿಯ ಎಲ್‌ಪಿಜಿ ಐಡಿಯನ್ನು (LPG ID) ಖಾತೆಗೆ ಲಿಂಕ್ ಮಾಡಿ.

-ಆಪ್‌ನಲ್ಲಿನ ‘My Profile’ ವಿಭಾಗಕ್ಕೆ ಹೋಗಿ.

-ಎಲ್‌ಪಿಜಿ ವಿವರಗಳನ್ನು ಆಯ್ದುಕೊಂಡು, ಅಲ್ಲಿ ಕಾಣಿಸುವ ‘e-KYC’ ಆಯ್ಕೆಯನ್ನು ಕ್ಲಿಕ್ ಮಾಡಿ.

-ನಿಯಮ ಮತ್ತು ಷರತ್ತುಗಳನ್ನು ಓದಿ, ಒಪ್ಪಿಗೆ ನೀಡಿ.

-ಆಧಾರ್ ಫೇಸ್ ಅಥೆಂಟಿಕೇಶನ್ (Aadhaar face authentication – ಮುಖದ ಗುರುತು ಪರಿಶೀಲನೆ) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಬ್ಮಿಟ್ ಮಾಡಿ.

ಭಾರತ್ ಗ್ಯಾಸ್ (BharatGas) ಇ-ಕೆವೈಸಿ ವಿಧಾನ:

– ಗೂಗಲ್ ಪ್ಲೇ ಸ್ಟೋರ್‌ನಿಂದ Hello BPCL ಆಪ್ ಡೌನ್‌ಲೋಡ್ ಮಾಡಿ.

– ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನೀಡಿ ಲಾಗ್-ಇನ್ ಆಗಿ.

– ಹೋಮ್ ಸ್ಕ್ರೀನ್‌ನಲ್ಲಿರುವ ‘e-KYC’ ಆಯ್ಕೆಯನ್ನು ಆರಿಸಿಕೊಳ್ಳಿ.

– ನಿಮ್ಮ ಮೊಬೈಲ್‌ಗೆ ಬರುವ OTP ಯನ್ನು ನಮೂದಿಸಿ ವೆರಿಫೈ ಮಾಡಿ.

– ನಿಯಮಗಳನ್ನು ಒಪ್ಪಿಕೊಂಡು, ಬಯೋಮೆಟ್ರಿಕ್/ಮುಖದ ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಜಿಯನ್ನು ಸಲ್ಲಿಸಿ.