ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಸುಳ್ಯ : ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

Posted by Bantwala Isiri News | Jan 6, 2026 | ಬಂಟ್ವಾಳ | 0 |

ಸುಳ್ಯ : ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

ಮಂಗಳೂರು: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವುದು ಸುಳ್ಯದ (Sullia) ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಅಮೆರಿಕ ದಾಳಿ – 40 ಮಂದಿ ನಾಗರಿಕರು ಸಾವು

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮಗು ಧನ್ವಿ (3) ಮೃತರು ಎಂದು ಗುರುತಿಸಲಾಗಿದೆ. ಹರೀಶ್ ಅವರು ತನ್ನ ತಾಯಿ, ಪತ್ನಿ, ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದರು. ರಾತ್ರಿ ಮನೆಯವರೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿ ಮಲಗಿದ್ದ ಮಧುಶ್ರೀ, ಬೆಳಗ್ಗೆ ಮಗು ಸಹಿತ ಕಾಣದೇ ಇದ್ದ ವೇಳೆ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಹುಡುಕಾಟದ ವೇಳೆ ಮನೆ ಸಮೀಪದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ.

ಮಧುಶ್ರೀ ಅವರು ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾದ ಮಧುಶ್ರೀ ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಧುಶ್ರೀ ಅವರು ಕೆರೆಗೆ ಹಾರುವ ಮೊದಲು ಮಗುವಿನೊಂದಿಗೆ ಸಾಯಲು ನಿರ್ಧರಿಸಿ ತನ್ನ ಸೊಂಟಕ್ಕೆ ಮಗುವನ್ನು ಬಟ್ಟೆಯಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ. ಕೆರೆಯಲ್ಲಿ ಮೃತದೇಹ ಪತ್ತೆಯಾದಾಗ ಮಗು ತಾಯಿಯನ್ನು ಅಪ್ಪಿಕೊಂಡ ರೀತಿಯಲ್ಲೇ ಪತ್ತೆಯಾಗಿದೆ. ಮಗಳ ಸಾವಿನಲ್ಲಿ ಅನುಮಾನ ಇದೆ ಎಂದು ಮಧುಶ್ರೀ ತಾಯಿ ರತ್ನಾವತಿ ದೂರು ನೀಡಿದ್ದಾರೆ.

ಬೆಳ್ಳಾರೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಆತ್ಮಹತ್ಯೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share:

Rate:

Previousನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು, ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯ ಕ್ರಮ
Nextಮೈಸೂರು ಜಿಲ್ಲಾ ಕುಂಬಾರ ಸಂಘ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟದಲ್ಲಿ 33 ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿ ಅಭಿನಂದನೆ

ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟದಲ್ಲಿ 33 ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿ ಅಭಿನಂದನೆ

19 March 2025

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ

20 September 2024

ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

10 June 2025

ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಅವರು  ಸಿ.ಎಂ.ಭೇಟಿ

ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಅವರು ಸಿ.ಎಂ.ಭೇಟಿ

17 February 2026

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಬೆಂಗ್ಳೂರಲ್ಲಿ ಪಕ್ಕದ ಮನೆಯವನಿಂದಲೇ ಬಾಲಕನ ಕಿಡ್ನ್ಯಾಪ್‌ ಮಾಡಿ ಹತ್ಯೆ – ಆರೋಪಿ ಅರೆಸ್ಟ್‌
    ಬೆಂಗ್ಳೂರಲ್ಲಿ ಪಕ್ಕದ ಮನೆಯವನಿಂದಲೇ ಬಾಲಕನ ಕಿಡ್ನ್ಯಾಪ್‌ ಮಾಡಿ ಹತ್ಯೆ – ಆರೋಪಿ ಅರೆಸ್ಟ್‌
  • ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ
    ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ
  • ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ – ಡಿ.ಕೆ. ಶಿವಕುಮಾರ್ 
    ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ – ಡಿ.ಕೆ. ಶಿವಕುಮಾರ್ 
  • ತೆಂಗಿನ ನಾರು ಉದ್ಯಮವು ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಮಾರ್ಗವಾಗಿ ಹೊರಹೊಮ್ಮುತ್ತಿದೆ.
    ತೆಂಗಿನ ನಾರು ಉದ್ಯಮವು ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಮಾರ್ಗವಾಗಿ ಹೊರಹೊಮ್ಮುತ್ತಿದೆ.
  • ನ್ಯೂಯಾರ್ಕ್‌ನಲ್ಲಿ ದುರಂತ: ರೈಲು ಹಳಿ ಮೇಲೆ ಕುಳಿತಿದ್ದ ಭಾರತೀಯ ಮೂಲದ ಯುವತಿ, ಸ್ನೇಹಿತ ಸಾವು
    ನ್ಯೂಯಾರ್ಕ್‌ನಲ್ಲಿ ದುರಂತ: ರೈಲು ಹಳಿ ಮೇಲೆ ಕುಳಿತಿದ್ದ ಭಾರತೀಯ ಮೂಲದ ಯುವತಿ, ಸ್ನೇಹಿತ ಸಾವು
  • 70 ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯ ಜಾಲ ಪತ್ತೆ; ಸಹರನ್‌ಪುರದಲ್ಲಿ ಐವರ ಗ್ಯಾಂಗ್‌ ಬಂಧನ
    70 ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯ ಜಾಲ ಪತ್ತೆ; ಸಹರನ್‌ಪುರದಲ್ಲಿ ಐವರ ಗ್ಯಾಂಗ್‌ ಬಂಧನ
  • ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ॥
    ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ॥
  • ಬಳ್ಳಾರಿ ಚಲೋ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರ ಭಾಗಿ
    ಬಳ್ಳಾರಿ ಚಲೋ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರ ಭಾಗಿ
  • ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ
    ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ
  • ಬೆಂಗಳೂರು ಡಿಆರ್‌ಐ ಅಧಿಕಾರಿಗಳ ಕಾರ್ಯಾಚರಣೆ – 180 ನಕ್ಷತ್ರ ಆಮೆಗಳು ವಶಕ್ಕೆ
    ಬೆಂಗಳೂರು ಡಿಆರ್‌ಐ ಅಧಿಕಾರಿಗಳ ಕಾರ್ಯಾಚರಣೆ – 180 ನಕ್ಷತ್ರ ಆಮೆಗಳು ವಶಕ್ಕೆ

Designed by Elegant Themes | Powered by WordPress

error: Content is protected !!