ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಮಳೆ (Rain) ಕೈಕೊಟ್ಟಿದೆ. ಇದರಿಂದ ಕಂಗಾಲಾದ ರೈತರು ಮಳೆಗಾಗಿ ಪೂಜೆ ಪುನಸ್ಕಾರ, ಪೂರ್ವಜರ ಆಚರಣೆಗಳ ಮೊರೆ ಹೋಗಿದ್ದಾರೆ. ಅದರಂತೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಕತ್ತೆಗಳಿಗೆ ಅದ್ದೂರಿಯಾಗಿ ಮದುವೆ ಮಾಡಿಸಿ, ದೇವರ ಬಳಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.ಇದನ್ನೂ ಓದಿ:ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ದುರಂತ : ಯುಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ

ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಈ ವೇಳೆ ಕತ್ತೆಗಳಿಗೆ ಅಲಂಕಾರ ಮಾಡಿ, ಶಾಸ್ತ್ರೋಕ್ತವಾಗಿ ವಾದ್ಯ ಮೇಳಗಳ ಜೊತೆ ಮೆರವಣಿಗೆ ಮಾಡಿಸಿದ್ದಾರೆ. ದೇವರಿಗೆ ನೈವೇದ್ಯ ಇಟ್ಟು ಸಾವಿರಾರು ಜನರಿಗೆ ಊಟ ಹಾಕಿಸಿದ್ದಾರೆ.

ಕತ್ತೆಗಳಿಗೆ ಮದುವೆ ಮಾಡಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವನ್ನು ಗ್ರಾಮಸ್ಥರು ಮುಂದುವರೆಸಿದ್ದಾರೆ.