– ರಷ್ಯಾ ಸಂಸತ್‌ ಚುನಾವಣೆ ಅಂತಿಮ ದಿನವೇ ದಾಳಿ
– ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸಿದ ರಷ್ಯಾ

ಮಾಸ್ಕೋ: ಉಕ್ರೇನ್‌ ಪಡೆಗಳು ರಷ್ಯಾ ಮೇಲೆ ಒಂದೇ ರಾತ್ರಿಯಲ್ಲಿ 1,100ಕ್ಕೂ ಹೆಚ್ಚು ಡ್ರೋನ್‌ಗಳನ್ನ ಹಾರಿಸಿದ್ದು (Ukraine Drone Attack), ಈ ಪೈಕಿ ನೂರಾರು ಡ್ರೋನ್‌ಗಳನ್ನ ಮಾಸ್ಕೋ ಗುರಿಯಾಗಿಸಿ ಹಾರಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ,

ಇದನ್ನೂ ಓದಿ : ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ – ಡಿ.ಕೆ.ಶಿವಕುಮಾರ್

ರಷ್ಯಾ ಅಧಿಕಾರಿಗಳು ಕೂಡ ಈ ದಾಳಿಯನ್ನ ಒಪ್ಪಿಕೊಂಡಿದ್ದಾರೆ. ಇದು ರಷ್ಯಾ ಮೇಲೆ ಇದುವರೆಗೆ ನಡೆಸಿದ್ದಕ್ಕಿಂತಲೂ ಅತಿದೊಡ್ಡ ದಾಳಿಯಾಗಿದೆ. ದಾಳಿಯಿಂದ ಮಾಸ್ಕೋ ತೈಲ ಸಂಸ್ಕರಣಾ ಘಟಕ (Oil Refinery) ಹಾಗೂ ವಸತಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಮಾಸ್ಕೋ ಮೇಯರ್‌ ಸೆರ್ಗೆಯ್‌ ಸೊಬ್ಯಾನಿನ್‌ ಹೇಳಿದ್ದಾರೆ.

ಏಟಿಗೆ ಎದುರೇಟು – 1,100 ಉಕ್ರೇನ್‌ ಡ್ರೋನ್‌ಗಳು ಉಡೀಸ್‌
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ, ಕ್ರಿಮಿಯಾ ಹಾಗೂ ಕಪ್ಪು ಸಮುದ್ರದ ಮೇಲೆ ಉಕ್ರೇನ್‌ ಹಾರಿಸಿದ ಒಟ್ಟು 1,100 ಡ್ರೋನ್‌ಗಳನ್ನ ಹೊಡೆದುರುಳಿಸಲಾಗಿದೆ. ಮಾಸ್ಕೋ ಕಡೆಗೆ ಬರುತ್ತಿದ್ದ 450 ಡ್ರೋನ್‌ಗಳನ್ನೂ ನಾಶಪಡಿಸಲಾಗಿದೆ. ಆದ್ರೆ ಡ್ರೋನ್‌ ತಡೆಯುವ ಕಾರ್ಯಾಚರಣೆ ವೇಳೆ 2 ಕಡೆ ಹಾನಿಯಾಗಿದೆ. ಮಾಸ್ಕೋ ತೈಲ ಸಂಸ್ಕರಣಾ ಘಟಕ ಹಾಗೂ ವಸತಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸೆರ್ಗೆಯ್‌ ಒಪ್ಪಿಕೊಂಡಿದ್ದಾರೆ.

ರಷ್ಯಾದಲ್ಲಿ ಇಬ್ಬರು ಸಾವು, 20 ಮಂದಿಗೆ ಗಾಯ
ದಾಳಿಯ ಪರಿಣಾಮ ಮಾಸ್ಕೋದ (Moscow) ಸುತ್ತಮುತ್ತಲಿನ ಪ್ರದೇಶದಲ್ಲಿ ಇಬ್ಬರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಮಾಸ್ಕೋ ಗವರ್ನರ್‌ ಆಂಡ್ರೇ ವೊರೊಬ್ಯೋವ್‌ ತಿಳಿಸಿದ್ದಾರೆ.

ಮೃತರನ್ನು 74 ವರ್ಷದ ವ್ಯಕ್ತಿ ಹಾಗೂ 44 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ದಾಳಿಯಿಂದ ಉಂಟಾದ ಹಾನಿಯ ಪ್ರಮಾಣದ ಕುರಿತು ರಷ್ಯಾದ ಅಧಿಕಾರಿಗಳು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.

ರಷ್ಯಾ ಸಂಸತ್‌ ಚುನಾವಣೆ ಅಂತಿಮ ದಿನವೇ ದಾಳಿ
ರಷ್ಯಾದಲ್ಲಿ ಸಂಸತ್‌ ಚುನಾವಣೆಯ 3ನೇ ಹಾಗೂ ಅಂತಿಮ ದಿನದ ಮತದಾನ ನಡೆಯುತ್ತಿದ್ದ ವೇಳೆಯಲ್ಲೇ ಈ ಭಾರೀ ಡ್ರೋನ್‌ ದಾಳಿ ನಡೆದಿದೆ. ಇದು ಯುದ್ಧ ಆರಂಭವಾದ ಬಳಿಕ ರಷ್ಯಾದಲ್ಲಿ ನಡೆದ ಮೊದಲ ಯುದ್ಧಕಾಲದ ಸಂಸತ್‌ ಚುನಾವಣೆ ಎಂದು ಹೇಳಲಾಗಿದೆ.