Uಬಂಟ್ಟಾಳ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಶ್ರೀ ಗಣೇಶೋತ್ಸದಲ್ಲಿ ವಿಶೇಷ ಪೂಜೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭಾಗವಹಿಸಿ, ಪ್ರಧಾನಿಯವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶಸೇವೆಗೆ ಮತ್ತಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ – ಡಿ.ಕೆ. ಶಿವಕುಮಾರ್ 

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಮುಖ ವಿಕಾಸ್ ಪುತ್ತೂರು, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಗೋಪಾಲ ಸುವರ್ಣ, ದಿನೇಶ್ ಭಂಡಾರಿ, ಜನಾರ್ದನ ಬೊಂಡಾಲ, ಹರಿಪ್ರಸಾದ್, ಮೋಹನ್ ಪಿ.ಎಸ್., ಸಂತೋಷ್ ನರಿಕೊಂಬು, ಭಾಸ್ಕರ ಟೈಲರ್, ಸದಾನಂದ ನಾವೂರ, ಕಾರ್ತಿಕ್ ಬಲ್ಲಾಳ್, ಸುರೇಶ್ ಕೋಟ್ಯಾನ್, ಪ್ರಣಾಮ್ ರಾಜ್, ಲಕ್ಷಣ್ ರಾಜ್ ಪಾಣೆಮಂಗಳೂರು, ರಜನಿ ಚಿಕ್ಕಯ್ಯಮಠ ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಕೊಳತ್ತಮಜಲು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಭಕ್ತರು ಉಪಸ್ಥಿತರಿದ್ದರು.