ತುಮಕೂರು: ತೋಟಕ್ಕೆ ವಾಕಿಂಗ್‌ಗೆಂದು (Walking) ತೆರಳಿದ್ದ ವೃದ್ಧೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಕೊರಟಗೆರೆ (Koratagere) ತಾಲ್ಲೂಕಿನ ಸಿಎನ್ ದುರ್ಗದ ದಾಸಲುಕುಂಟೆಯಲ್ಲಿ ನಡೆದಿದೆ.  ಇದನ್ನೂ ಓದಿ : ದ.ಕ.ಜಿ.ಪಂ. ಕಿ.ಪ್ರಾ. ಶಾಲೆ ಏಮಾಜೆ : ಸಂಭ್ರಮದ ‘ಸೃಜನೋತ್ಸವ – 2026’ ವಿನೂತನ ಕಾರ್ಯಕ್ರಮ

ರತ್ನಮ್ಮ (74) ಕೊಲೆಯಾದ ವೃದ್ಧೆ. ರತ್ನಮ್ಮ ಮಂಗಳವಾರ ಸಂಜೆ ವಾಕಿಂಗ್‌ಗೆಂದು ತೆರಳಿದ್ದು, ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಈ ಹಿನ್ನೆಲೆ ಅನುಮಾನಗೊಂಡ ಸೊಸೆ ಭಾಗ್ಯಮ್ಮ ಹಾಗೂ ಊರಿನ ಜನರು ರತ್ನಮ್ಮನಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆಯಿಂದ ಒಂದು ಕಿ.ಮಿ ದೂರದ ತೋಟದ ಮನೆ ಬಳಿ ರತ್ನಮ್ಮ ಶವವಾಗಿ ಪತ್ತೆಯಾಗಿದ್ದಾರೆ.

ಕಳೆದ ಮೂರು ವರ್ಷದ ಹಿಂದೆ ರತ್ನಮ್ಮ ತಮ್ಮ ಪತಿ ಮುದ್ದಬಸಪ್ಪರನ್ನು ಕಳೆದುಕೊಂಡಿದ್ದರು. ಬಳಿಕ ಸೊಸೆ ಭಾಗ್ಯಮ್ಮ ಜೊತೆ ವಾಸವಾಗಿದ್ದರು. ರತ್ನಮ್ಮ ಪ್ರತಿದಿನ ಸಂಜೆ ತೋಟಕ್ಕೆ ವಾಕಿಂಗ್‌ಗೆ ತೆರಳುತಿದ್ದರು. ಅದೇ ರೀತಿ ಮಂಗಳವಾರ ತೆರಳಿದಾಗ ಹತ್ಯೆ ಮಾಡಲಾಗಿದೆ. ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ಸುತ್ತಿ ರತ್ನಮ್ಮನನ್ನು ಕೊಲೆ ಮಾಡಲಾಗಿದೆ. ಮೈಮೆಲಿದ್ದ ಚಿನ್ನಕ್ಕಾಗಿ ರತ್ನಮ್ಮನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ರತ್ನಮ್ಮ ಮೃತದೇಹವನ್ನು ಮರಣೊತ್ತರ ಪರಿಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.