ಜು.13 ರಂದು ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶಿಕ್ಷಕಿ ಶ್ರೀಮತಿ ಗಾಯತ್ರಿ ಮತ್ತು ಸಂಘದ ಎಲ್ಲಾ ಸದಸ್ಯರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿತು. ಆಧುನಿಕ ತಂತ್ರಜ್ಞಾನದ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮತಚಲಾಯಿಸಿದರು. ವಿದ್ಯಾರ್ಥಿ ಸಂಘದ ನಾಯಕರಾಗಿ ಭವಿಷ್ ಎಲ್ ಪೂಜಾರಿ ೧೦ ನೇ, ಉಪನಾಯಕನಾಗಿ ಅನೂಪ್ ರಾಜೇಶ್ ೯ನೇ, ಯೋಜನಾಧಿಕಾರಿಯಾಗಿ ಸ್ನೇಹಲ್ ಗಾಣಿಗ ೧೦ ನೇ ತರಗತಿ ಇವರು ಆಯ್ಕೆಯಾದರು.
ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಶ್ರೀಯುತ ಹರಿಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚೈತ್ರ ಶೆಟ್ಟಿ ಮತ್ತು ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿಯಾದ ಶ್ರೀಮತಿ ವೀಣಾ ದೇವಾಡಿಗ ಇವರ ಮಾರ್ಗದರ್ಶನದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಸಲಾಯಿತು.