ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಬೋಳಂತೂರು ಗ್ರಾಮದ ಬೀರುಕೋಡಿ ಎಂಬಲ್ಲಿ ಬೋಳಂತೂರು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಲಾದ ನೂತನ ಹಿಂದೂ ರುದ್ರ ಭೂಮಿಯಲ್ಲಿ ಶ್ರಮದಾನ ಕಾರ್ಯ ನಡೆಸಲಾಯಿತು. ಇದನ್ನೂ ಓದಿ :ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಕೋಟಿ ಚೆನ್ನಯ ಕ್ರೀಡೋತ್ಸವದ ಆಮಂತ್ರಣ ಬಿಡುಗಡೆ

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಕ್ಕದ ಗುಡ್ಡೆಗೆ ಬೆಂಕಿ ತಗಳಿದ್ದು ಶೌರ್ಯ ತಂಡ ಸದಸ್ಯರು ಅದನ್ನು ನಂದಿಸುವ ಕಾರ್ಯ ಯಶಸ್ವಿಯಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೋಳಂತೂರು ಪಂಚಾಯತ್ ಸದಸ್ಯರು ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷರಾದ ಬಿ ಚಂದ್ರಶೇಖರ್ ರೈ ಬೋಳಂತೂರು, ಉಪಾಧ್ಯಕ್ಷರಾದ ನೋಣಯ್ಯ ಜಿ ಎನ್, ಕಾರ್ಯದರ್ಶಿ ಚೆನ್ನಪ್ಪ ಪೂಜಾರಿ ಗುಂಡಿಮಜಲು, ಕೋಶಾಧಿಕಾರಿ ಗೋಪಾಲ, ಸದಸ್ಯರುಗಳಾದ ವಿಶ್ವನಾಥ್ ಗುಂಡಿಮಜಲು, ರವಿ ಉತ್ತಮ ನಗರ, ಸದಾನಂದ ಪ್ರತಾಪ್ ನಗರ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ವಿದ್ಯಾ ಸದಸ್ಯರುಗಳಾದ ಗಣೇಶ್ ನೆಟ್ಲ, ರವಿಚಂದ್ರ, ವೆಂಕಪ್ಪ, ತುಳಸಿ, ಚಿನ್ನಾ ಉಪಸ್ಥಿತರಿದ್ದರು.
