ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಇಂಡಿಗೋದಲ್ಲಿ ಭಾರೀ ಅಡಚಣೆ – ಬೆಂಗಳೂರಲ್ಲಿ 73 ಸೇರಿ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Posted by Bantwala Isiri News | Dec 4, 2025 | ಬಂಟ್ವಾಳ | 0 |

ಇಂಡಿಗೋದಲ್ಲಿ ಭಾರೀ ಅಡಚಣೆ – ಬೆಂಗಳೂರಲ್ಲಿ 73 ಸೇರಿ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ ಮೂರನೇ ದಿನವೂ ಮುಂದುವರಿದಿದೆ. ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್‌  ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇನ್ನು ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬ ಕಂಡುಬಂದಿತ್ತು. ಈ ಸಮಸ್ಯೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ. .

ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆ ಇತರ ಸಮಸ್ಯೆಗಳಿಂದ ಇಂದು ಸಹ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ವ್ಯಾಪಕ ವಿಳಂಬ ಮತ್ತು ರದ್ದತಿಯಿಂದಾಗಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ :4 ಡಿಸೆಂಬರ್‌ Indian Navy Day (ಭಾರತೀಯ ನೌಕಾಪಡೆ ದಿನ)

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ತಾಂತ್ರಿಕ ದೋಷ ಉಂಟಾಗಿರುವ ಪರಿಣಾಮ 73 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ನಿನ್ನೆ 43 ವಿಮಾನಗಳ ಹಾರಾಟ ರದ್ದುಗೊಳಿಸಿದ್ದ ಇಂಡಿಗೋ ಇಂದು 73 ವಿಮಾನ ಹಾರಾಟ ರದ್ದುಗೊಳಿಸಿದೆ.

ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿಗಳ ಹಿಂದಿನ ಕಾರಣಗಳನ್ನ ವಿವರಿಸುವಂತೆ ಮತ್ತು ಪರಿಸ್ಥಿತಿ ಸುಧಾರಿಸಲು ಒಂದು ಯೋಜನೆ ನೀಡುವಂತೆ ಡಿಜಿಸಿಎ (DGCA) ಇಂಡಿಗೋಗೆ ಸೂಚಿಸಿದೆ. ಅಲ್ಲದೇ ಈ ಕುರಿತು ಇಂದು ಮಧ್ಯಾಹ್ನ ನಡೆಯಲಿರುವ ಉನ್ನತ ಮಟ್ಟದ ಸಭೆಗೆ ಇಂಡಿಗೋ ಅಧಿಕಾರಿಗಳಿಗೆ ಬುಲಾವ್‌ ನೀಡಿದೆ.

ಉಂಟಾಗಿರುವ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಇಂಡಿಗೋ ಸಂಸ್ಥೆಯು, 48 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿದೆ. ಜೊತೆಗೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.

ಸಣ್ಣಪುಟ್ಟ ತಾಂತ್ರಿಕ ದೋಷಗಳು, ಚಳಿಗಾಲದ ವೇಳಾಪಟ್ಟಿಯಲ್ಲಿನ ಹೊಂದಾಣಿಕೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ, ವಿಮಾನ ನಿಲ್ದಾಣದಲ್ಲಿನ ದಟ್ಟಣೆ ಹಾಗೂ ನವೀಕರಿಸಿದ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಅನುಷ್ಠಾನ ಸೇರಿದಂತೆ ಅನಿರೀಕ್ಷಿತ ಕಾರ್ಯಾಚರಣೆ ಸವಾಲುಗಳು ಅಡಚಣೆಗೆ ಕಾರಣವಾಗಿದೆ. ಇದನ್ನ ನಾವು ಊಹಿಸಿಯೂ ಇರಲಿಲ್ಲ. ಹಾಗಾಗಿ ಸಿಬ್ಬಂದಿ ಲಭ್ಯತೆಗೆ ಅನುಗುಣವಾಗಿ ಕಾರ್ಯಾಚರಣೆ ಸ್ಥಿರಗೊಳಿಸಲು ಕೆಲ ವಿಮಾನಗಳ ವೇಳಾಪಟ್ಟಿ ಬದಲಾವಣೆ ಮತ್ತು ರದ್ದತಿ ಆಗಿದೆ ಎಂದು ತಿಳಿಸಿದೆ.

Share:

Rate:

Previous4 ಡಿಸೆಂಬರ್‌ Indian Navy Day (ಭಾರತೀಯ ನೌಕಾಪಡೆ ದಿನ)
Nextವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ನಡೆದ ಮಹಿಳಾ ನೌಕರರ ಸಮ್ಮೇಳನ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ವೀರಕಂಬ ಗ್ರಾಮ ಪಂಚಾಯತ್ ಸಂವಿಧಾನ ಜಾಗೃತಿ ಜಾಥಾ

ವೀರಕಂಬ ಗ್ರಾಮ ಪಂಚಾಯತ್ ಸಂವಿಧಾನ ಜಾಗೃತಿ ಜಾಥಾ

9 February 2024

ಸುಪ್ರೀಂ ಕೋರ್ಟ್ ಆದೇಶದಂತೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು ತೆರೆಯಲು ಮುಂದಾದ ಸರ್ಕಾರ

ಸುಪ್ರೀಂ ಕೋರ್ಟ್ ಆದೇಶದಂತೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು ತೆರೆಯಲು ಮುಂದಾದ ಸರ್ಕಾರ

14 July 2024

ರೀಲ್ಸ್ ತಂದ ಆಪತ್ತು- ರಜತ್, ವಿನಯ್‌ ಅರೆಸ್ಟ್‌

ರೀಲ್ಸ್ ತಂದ ಆಪತ್ತು- ರಜತ್, ವಿನಯ್‌ ಅರೆಸ್ಟ್‌

24 March 2025

ಕೆಲಿಂಜ  ಹಿ. ಪ್ರಾ. ಶಾಲೆಯ  2024-2025 ನೇ ಸಾಲಿನ ಶಾಲಾ ಪ್ರಾರಂಭೋತ್ಸವ

ಕೆಲಿಂಜ ಹಿ. ಪ್ರಾ. ಶಾಲೆಯ 2024-2025 ನೇ ಸಾಲಿನ ಶಾಲಾ ಪ್ರಾರಂಭೋತ್ಸವ

1 June 2024

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ದೆಹಲಿಯಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಐವರು ಸಾವು
    ದೆಹಲಿಯಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಐವರು ಸಾವು
  • ವಿಟ್ಲಪಿಂಡಿ ಉತ್ಸವ ವೇಳೆ ರಥದಿಂದ ಕೆಳಗೆ ಬಿದ್ದ ಮಣ್ಣಿನ ಮೂರ್ತಿ
    ವಿಟ್ಲಪಿಂಡಿ ಉತ್ಸವ ವೇಳೆ ರಥದಿಂದ ಕೆಳಗೆ ಬಿದ್ದ ಮಣ್ಣಿನ ಮೂರ್ತಿ
  • ಶಾಲೆಯಲ್ಲೇ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿ ದಾರುಣ ಸಾವು
    ಶಾಲೆಯಲ್ಲೇ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿ ದಾರುಣ ಸಾವು
  • ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ : ಸೌರ ವಿದ್ಯುತ್ ಘಟಕದ ಉದ್ಘಾಟಣೆ
    ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ : ಸೌರ ವಿದ್ಯುತ್ ಘಟಕದ ಉದ್ಘಾಟಣೆ
  • ಬಿ.ಸಿ.ರೋಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಲೋಕಾರ್ಪಣೆ
    ಬಿ.ಸಿ.ರೋಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಲೋಕಾರ್ಪಣೆ
  • ನಿಧನ:  ಪಾಣೆಮಂಗಳೂರು ಶ್ರೀ ಪಾಂಡುರಂಗ ಪ್ರಭು
    ನಿಧನ: ಪಾಣೆಮಂಗಳೂರು ಶ್ರೀ ಪಾಂಡುರಂಗ ಪ್ರಭು
  • ಗುರುಗಳ ತತ್ವ–ಆದರ್ಶ ಪಾಲನೆಯೇ ಶ್ರೇಷ್ಠ ಗುರುದಕ್ಷಿಣೆ: ಶಾಸಕ ರಾಜೇಶ್ ನಾಯ್ಕ್
    ಗುರುಗಳ ತತ್ವ–ಆದರ್ಶ ಪಾಲನೆಯೇ ಶ್ರೇಷ್ಠ ಗುರುದಕ್ಷಿಣೆ: ಶಾಸಕ ರಾಜೇಶ್ ನಾಯ್ಕ್
  • ನೇಪಾಳ ಭೀಕರ ಪ್ರವಾಹ | 400ರ ಗಡಿಯತ್ತ ಸಾವಿನ ಸಂಖ್ಯೆ – 1500ಕ್ಕೂ ಹೆಚ್ಚು ಜನ ನಾಪತ್ತೆ
    ನೇಪಾಳ ಭೀಕರ ಪ್ರವಾಹ | 400ರ ಗಡಿಯತ್ತ ಸಾವಿನ ಸಂಖ್ಯೆ – 1500ಕ್ಕೂ ಹೆಚ್ಚು ಜನ ನಾಪತ್ತೆ
  • ಏರಮಲೆ ಕ್ಷೇತ್ರದಲ್ಲಿ 12 ಕಾಯಿ ಗಣಹೋಮ
    ಏರಮಲೆ ಕ್ಷೇತ್ರದಲ್ಲಿ 12 ಕಾಯಿ ಗಣಹೋಮ
  • ನೇಪಾಳ ಜಲಪ್ರಳಯಕ್ಕೆ ನಗರಗಳೇ ಸರ್ವನಾಶ: 300 ಭಾರತೀಯರು ಸೇರಿ ನೂರಾರು ಜನ ನಾಪತ್ತೆ
    ನೇಪಾಳ ಜಲಪ್ರಳಯಕ್ಕೆ ನಗರಗಳೇ ಸರ್ವನಾಶ: 300 ಭಾರತೀಯರು ಸೇರಿ ನೂರಾರು ಜನ ನಾಪತ್ತೆ

Designed by Elegant Themes | Powered by WordPress

error: Content is protected !!