ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಥಾಪನೆಯಾಗುತ್ತಿದೆ ತಾಯಿ ಎದೆಹಾಲಿನ ಬ್ಯಾಂಕ್

Posted by Bantwala Isiri News | Jul 13, 2025 | ಬಂಟ್ವಾಳ | 0 |

ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಸ್ಥಾಪನೆಯಾಗುತ್ತಿದೆ ತಾಯಿ ಎದೆಹಾಲಿನ ಬ್ಯಾಂಕ್

– ಅವಧಿಪೂರ್ವ ಜನನ, ಅಪೌಷ್ಟಿಕತೆ ಹಾಗೂ ಕಡಿಮೆ ತೂಕದ ಮಕ್ಕಳಿಗೆ ಅನುಕೂಲ
– 75 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿದೆ ಅಮೃತಧಾರೆ

ಬಳ್ಳಾರಿ: ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕ ಹಾಗೂ ಆನಾರೋಗ್ಯ ಪೀಡಿತ ಶಿಶುಗಳಿಗೆ ಎದುರಾಗುವ ತಾಯಿಯ ಎದೆಹಾಲಿನ (Breast Milk) ಕೊರತೆ ನೀಗಿಸಲು ಅಮೃತಧಾರೆ (Amruthadhare) ಹೆಸರಿನಡಿ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮೊಟ್ಟ ಮೊದಲ ಬಾರಿ ಬಳ್ಳಾರಿ (Ballari) ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹಾಲಿನ ಬ್ಯಾಂಕ್‌ ಸ್ಥಾಪಿಸಲು ಭರದ ಸಿದ್ಧತೆ ನಡೆದಿದೆ.

ಬಳ್ಳಾರಿ ವಿಮ್ಸ್‌ನಲ್ಲಿ ನಿತ್ಯ 25-30 ಹೆರಿಗೆಗಳಾಗುತ್ತಿದ್ದು, ತಾಯಿ ಮತ್ತು ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಹಲವು ಸೌಲಭ್ಯಗಳ ಮಧ್ಯೆ ಕಡಿಮೆ ತೂಕ, ಅವಧಿ ಪೂರ್ವ ಹಾಗೂ ಅನಾರೋಗ್ಯ ಶಿಶುಗಳ ಜನನ ಸಾಮಾನ್ಯವಾಗಿದೆ. ಇಂಥ ಮಕ್ಕಳು ತಾಯಿಯ ಎದೆಹಾಲಿನ ಕೊರತೆ ಎದುರಿಸುವುದನ್ನು ತಡೆಯುವ ದೂರದೃಷ್ಟಿಯಿಂದ ಹಾಲಿನ ಬ್ಯಾಂಕ್ ಸ್ಥಾಪನೆಗೆ ಯೋಜಿಸಲಾಗಿದೆ. ಇದನ್ನೂ ಓದಿ :  ಜು.14 ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮ
ಬಳ್ಳಾರಿ ಮಹಾನಗರ ಪಾಲಿಕೆಯಿಂದ 25 ಲಕ್ಷ ರೂ. ಹಾಗೂ ಜಿಲ್ಲಾಡಳಿತದ 50 ಲಕ್ಷ ರೂ. ಸೇರಿ ಒಟ್ಟು 75 ಲಕ್ಷ ರೂ. ಅನುದಾನದಲ್ಲಿ ಹಾಲಿನ ಬ್ಯಾಂಕ್‌ (Breast Milk Bank) ನಿರ್ಮಾಣ ಕೈಗೊಂಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಬ್ಯಾಂಕ್ ಒಟ್ಟು 510 ಬಾಟಲ್‌ಗಳಲ್ಲಿ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿದೆ
ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಅಪೌಷ್ಟಿಕತೆ, ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಜನನ ಸೇರಿ ಇತರ ಕಾರಣಗಳಿಂದ ಈ ಭಾಗದ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ತೀವ್ರವಾಗಿ ಕಾಡುತ್ತದೆ. ಹೆರಿಗೆ ಸಂದರ್ಭದಲ್ಲಿ ಮಕ್ಕಳಿಗೆ ಎದುರಾಗುವ ತಾಯಿ ಹಾಲಿನ ಕೊರತೆ ನೀಗಿಸಲು ರಾಜ್ಯದಲ್ಲಿರುವ ಬೆರಳೆಣಿಕೆಯಷ್ಟು ಹಾಲಿನ ಬ್ಯಾಂಕ್‌ ಗಳಿಗೆ ತೆರಳಲಾಗದ ಪಾಲಕರು ಹಸುವಿನ ಹಾಲು, ಗಂಜಿಯ ಮೊರೆ ಹೋಗುವುದು ಸಾಮಾನ್ಯವಾಗಿದೆ.

ತಾಯಿ ಹಾಲಿನ ದಾನಕ್ಕೂ ಅವಕಾಶ

ಹಾಲುಣಿಸುವ ಮಹಿಳೆಯರು ತಮ್ಮ ಹೆಚ್ಚುವರಿ ಹಾಲನ್ನು ದಾನ ಮಾಡಲು ಸಿದ್ಧರಿದ್ದರೆ ಈ ಬ್ಯಾಂಕ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜನಿಸಿದ ಮಗು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಅಸುನೀಗಿದರೆ ಅಂತಹ ತಾಯಿ ಹಾಲನ್ನು ದಾನ ಮಾಡಬಹುದಾಗಿದೆ. ಹೀಗೆ ಸಂಗ್ರಹಿಸಿದ ಹಾಲನ್ನು ಸುರಕ್ಷಿತವಾಗಿ ಇರಿಸಲು ವಿಮ್ಸ್‌ನಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Share:

Rate:

Previousಜು.14 ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮ
Nextಅಭಿನಯ ಸರಸ್ವತಿ ಸರೋಜಾದೇವಿ ವಿಧಿವಶ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಪಾನಿಪೂರಿ ತಿನ್ನುವ ವೇಳೆ ಗಲಾಟೆ – ಒಂದೇ ಪಂಚ್‌ಗೆ ಹಾರಿ ಹೋಯ್ತು ಯುವಕನ ಪ್ರಾಣ

ಪಾನಿಪೂರಿ ತಿನ್ನುವ ವೇಳೆ ಗಲಾಟೆ – ಒಂದೇ ಪಂಚ್‌ಗೆ ಹಾರಿ ಹೋಯ್ತು ಯುವಕನ ಪ್ರಾಣ

14 September 2025

ಕಡೇಶಿವಾಲಯ ಅರಿಕಲ್ಲು ಕೆಸರ್ಡೊಂಜಿ ದಿನ

ಕಡೇಶಿವಾಲಯ ಅರಿಕಲ್ಲು ಕೆಸರ್ಡೊಂಜಿ ದಿನ

21 January 2024

ಚಾಮರಾಜನಗರದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ  ಸಮಾರಂಭ

ಚಾಮರಾಜನಗರದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ  ಸಮಾರಂಭ

21 November 2025

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅನಿಲ್‌ ಲೋಬೋ – ಆಭಿನಂದನಾ ಸಮಾರಂಭ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅನಿಲ್‌ ಲೋಬೋ – ಆಭಿನಂದನಾ ಸಮಾರಂಭ

23 December 2023

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಚೀನಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 21 ಮಂದಿ ದಾರುಣ ಸಾವು, 61 ಜನಕ್ಕೆ ಗಾಯ
    ಚೀನಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 21 ಮಂದಿ ದಾರುಣ ಸಾವು, 61 ಜನಕ್ಕೆ ಗಾಯ
  • ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
    ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
  • ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲಾ ನೂತನ ಸಭಾ ಭವನ ರಚನೆಗೆ  ಅನುದಾನದ ಮಂಜುರಾತಿ ಪತ್ರ ಹಸ್ತಾಂತರ
    ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲಾ ನೂತನ ಸಭಾ ಭವನ ರಚನೆಗೆ  ಅನುದಾನದ ಮಂಜುರಾತಿ ಪತ್ರ ಹಸ್ತಾಂತರ
  • ಶ್ರೀ ವೆಂಕಟರಮಣಸ್ವಾಮೀ ಕಾಲೇಜು, ವಿದ್ಯಾಗಿರಿ, ಬಂಟ್ವಾಳ :  ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
    ಶ್ರೀ ವೆಂಕಟರಮಣಸ್ವಾಮೀ ಕಾಲೇಜು, ವಿದ್ಯಾಗಿರಿ, ಬಂಟ್ವಾಳ :  ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
  • State-Level Research Development Workshop (RDW) on “The Art and Rigour of Qualitative Research: Design, Data Collection, Analysis and Writing.”
    State-Level Research Development Workshop (RDW) on “The Art and Rigour of Qualitative Research: Design, Data Collection, Analysis and Writing.”
  • ಸದರಿ ವರ್ಷ ದಲ್ಲಿ ಸಾವಿರ ಒಲಿಂಪಿಯಡ್ ನೋಂದಾವಣೆ ಗುರಿ – ಆನಂದ ಸುವರ್ಣ
    ಸದರಿ ವರ್ಷ ದಲ್ಲಿ ಸಾವಿರ ಒಲಿಂಪಿಯಡ್ ನೋಂದಾವಣೆ ಗುರಿ – ಆನಂದ ಸುವರ್ಣ
  • ತಿಗಳರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಯ್ಕೆಯಾದ ಎಲ್.ಎ. ಮಂಜುನಾಥ್ ಅವರಿಗೆ ಆದೇಶಪತ್ರ ಹಸ್ತಾಂತರ
    ತಿಗಳರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಯ್ಕೆಯಾದ ಎಲ್.ಎ. ಮಂಜುನಾಥ್ ಅವರಿಗೆ ಆದೇಶಪತ್ರ ಹಸ್ತಾಂತರ
  • ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ – ಇ-ರೇಷ್ಮೆ ಪೋರ್ಟಲನ್ನು ಲೋಕಾರ್ಪಣೆಗೊಳಿಸಿದ – ಸಿ.ಎಂ.
    ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ – ಇ-ರೇಷ್ಮೆ ಪೋರ್ಟಲನ್ನು ಲೋಕಾರ್ಪಣೆಗೊಳಿಸಿದ – ಸಿ.ಎಂ.
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತವಾಗಿ ವೀಲ್ ಚೇರ್ ಹಸ್ತಾಂತರ
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತವಾಗಿ ವೀಲ್ ಚೇರ್ ಹಸ್ತಾಂತರ
  • ರಸ್ತೆ ದಾಟಲು ನಿಂತಿದ್ದಾಗ ತಲೆ ಸುತ್ತಿ ಬಿದ್ದ ವಿದ್ಯಾರ್ಥಿ – ಖಾಸಗಿ ಬಸ್ ಹರಿದು ಸಾವು
    ರಸ್ತೆ ದಾಟಲು ನಿಂತಿದ್ದಾಗ ತಲೆ ಸುತ್ತಿ ಬಿದ್ದ ವಿದ್ಯಾರ್ಥಿ – ಖಾಸಗಿ ಬಸ್ ಹರಿದು ಸಾವು

Designed by Elegant Themes | Powered by WordPress

error: Content is protected !!