ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಹರಿಯಾಣ : ನಿರ್ಮಾಣ ಹಂತದ ಗೋಡೆ ಕುಸಿತ – 7 ಕಾರ್ಮಿಕರು ಸಾವು, ಐವರ ಸ್ಥಿತಿ ಚಿಂತಾಜನಕ

Posted by Bantwala Isiri News | Mar 10, 2026 | ಬಂಟ್ವಾಳ | 0 |

ಹರಿಯಾಣ : ನಿರ್ಮಾಣ ಹಂತದ ಗೋಡೆ ಕುಸಿತ – 7 ಕಾರ್ಮಿಕರು ಸಾವು, ಐವರ ಸ್ಥಿತಿ ಚಿಂತಾಜನಕ

ಚಂಡೀಗಢ: ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ (Haryana) ಗುರುಗ್ರಾಮ್ (Gurugram) ಜಿಲ್ಲೆಯ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ನಡೆದಿದೆ.

ಮೃತ ಕಾರ್ಮಿಕರನ್ನು ಇಂದ್ರಜಿ ಸದಾ (32), ಭಾಗೀರಥ್ ಗೋಪಿ, ಛೋಟೆಲಾಲ್ ಸದಾ (37), ಶಿವಶಂಕರ್ (31), ಶಿವಕಾಂತ್ ಚೌಧರಿ (47) ಮತ್ತು ಮಂಗಾತ್ರಮ್ (32) ಎಂದು ಗುರುತಿಸಲಾಗಿದ್ದು, ಇನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ : ಅರುಣಾಚಲ ಪ್ರದೇಶದಲ್ಲಿ ಕಾಡ್ಗಿಚ್ಚು – ಬೆಂಕಿ ನಂದಿಸಲು ಹೆಲಿಕಾಪ್ಟರ್‌ನಿಂದ 66,000 ಲೀಟರ್ ನೀರು ಚೆಲ್ಲಿದ ವಾಯುಪಡೆ

ಅಧಿಕಾರಿಗಳ ಮಾಹಿತಿ ಪ್ರಕಾರ, ಸೋಮವಾರ (ಮಾ.9) ರಾತ್ರಿ 7 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಸುಮಾರು 12-15 ಕಾರ್ಮಿಕರ ಗುಂಪು ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗೋಡೆ ಕುಸಿದಿದ್ದು, ಕಾರ್ಮಿಕರು ಅವಶೇಷಗಳು ಹಾಗೂ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು. 9:30 ಸುಮಾರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಆರಂಭಿಸಿದವು ಎಂದು ತಿಳಿಸಿದ್ದಾರೆ.

ಈವರೆಗೆ ಏಳು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದ್ದು, ಅವರ ಬಳಿಯಿದ್ದ ಗುರುತಿನ ಚೀಟಿ ಆಧಾರದ ಮೇಲೆ ಕಾರ್ಮಿಕರ ಮಾಹಿತಿ ಪತ್ತೆ ಹಚ್ಚಲಾಗಿದೆ. ಇನ್ನೂ ಗಂಭೀರವಾಗಿ ಗಾಯಗೊಂಡ ಐವರು ಕಾರ್ಮಿಕರನ್ನು ರಾಜಸ್ಥಾನದ ಭಿವಾಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಪೊಲೀಸರು ಗೋಡೆ ಕುಸಿತಕ್ಕೆ ಕಾರಣವೇನು ಎಂಬುವುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

Share:

Rate:

Previousಅರುಣಾಚಲ ಪ್ರದೇಶದಲ್ಲಿ ಕಾಡ್ಗಿಚ್ಚು – ಬೆಂಕಿ ನಂದಿಸಲು ಹೆಲಿಕಾಪ್ಟರ್‌ನಿಂದ 66,000 ಲೀಟರ್ ನೀರು ಚೆಲ್ಲಿದ ವಾಯುಪಡೆ
Nextಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸನ ಶಿಬಿರ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಬಂಟ್ವಾಳ : ಗಣರಾಜ್ಯೋತ್ಸವ ಆಚರಣೆ

ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಬಂಟ್ವಾಳ : ಗಣರಾಜ್ಯೋತ್ಸವ ಆಚರಣೆ

29 January 2026

ಲಯನ್ಸ್ ಕ್ಲಬ್ ಬಂಟ್ವಾಳ- ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

ಲಯನ್ಸ್ ಕ್ಲಬ್ ಬಂಟ್ವಾಳ- ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

23 December 2023

ಯೋಜನೆಯ ಕಲ್ಲಡ್ಕ ಒಕ್ಕೂಟದ ವತಿಯಿಂದ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಯೋಜನೆಯ ಕಲ್ಲಡ್ಕ ಒಕ್ಕೂಟದ ವತಿಯಿಂದ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

27 December 2023

ಸಿ.ಎಂ.ಸಿದ್ಧರಾಮಯ್ಯ ಅವರು ಪ್ರಧಾನ ಮಂತ್ರಿ ಅವರನ್ನು ಭೇಟಿ

ಸಿ.ಎಂ.ಸಿದ್ಧರಾಮಯ್ಯ ಅವರು ಪ್ರಧಾನ ಮಂತ್ರಿ ಅವರನ್ನು ಭೇಟಿ

1 July 2024

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಭೀಕರ ಬಾಂಬ್ ಸ್ಫೋಟ – 13 ಮಂದಿ ಸಾವು, 18 ಮಂದಿಗೆ ಗಾಯ
    ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಭೀಕರ ಬಾಂಬ್ ಸ್ಫೋಟ – 13 ಮಂದಿ ಸಾವು, 18 ಮಂದಿಗೆ ಗಾಯ
  • ಭಾರೀ ಮಳೆಗೆ  ಮನೆ ಛಾವಣಿ ಕುಸಿತ :  ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
    ಭಾರೀ ಮಳೆಗೆ ಮನೆ ಛಾವಣಿ ಕುಸಿತ : ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
  • ಸಜೀಪಮೂಡ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಅಗ್ನಿ ಅವಘಡ ಮನೆಗೆ ಹಾನಿ – ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
    ಸಜೀಪಮೂಡ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಅಗ್ನಿ ಅವಘಡ ಮನೆಗೆ ಹಾನಿ – ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
  • ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ಪ್ರಕಾಶ್ ಅಂಚನ್ ಆಕ್ಷೇಪ
    ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ಪ್ರಕಾಶ್ ಅಂಚನ್ ಆಕ್ಷೇಪ
  • PM-RAHAT ಯೋಜನೆಯಡಿ ಅಪಘಾತಕ್ಕೊಳಗಾದವರನ್ನು ದಾಖಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಪ್ಟನ್ ಚೌಟ ಸೂಚನೆ.
    PM-RAHAT ಯೋಜನೆಯಡಿ ಅಪಘಾತಕ್ಕೊಳಗಾದವರನ್ನು ದಾಖಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಪ್ಟನ್ ಚೌಟ ಸೂಚನೆ.
  • ಎಸ್‌ಐಆರ್ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು ಶ್ರಮಿಸಿ: ಕಾರ್ಯಕರ್ತರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಕರೆ
    ಎಸ್‌ಐಆರ್ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು ಶ್ರಮಿಸಿ: ಕಾರ್ಯಕರ್ತರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಕರೆ
  • ಜನರ ಸಮಸ್ಯೆಗಳಿಗೆ ಸ್ಪಂದನೆ: ಸಾರ್ವಜನಿಕ ಅಹವಾಲು ಸ್ವೀಕರಿಸಿದ ಶಾಸಕ – ರಾಜೇಶ್ ನಾಯ್ಕ್
    ಜನರ ಸಮಸ್ಯೆಗಳಿಗೆ ಸ್ಪಂದನೆ: ಸಾರ್ವಜನಿಕ ಅಹವಾಲು ಸ್ವೀಕರಿಸಿದ ಶಾಸಕ – ರಾಜೇಶ್ ನಾಯ್ಕ್
  • ಮಳೆಗಾಗಿ ಕತ್ತೆಗಳಿಗೆ ಅದ್ದೂರಿ ಮದುವೆ – ಸಾವಿರಾರು ಮಂದಿಗೆ ಭರ್ಜರಿ ಭೋಜನ!
    ಮಳೆಗಾಗಿ ಕತ್ತೆಗಳಿಗೆ ಅದ್ದೂರಿ ಮದುವೆ – ಸಾವಿರಾರು ಮಂದಿಗೆ ಭರ್ಜರಿ ಭೋಜನ!
  • ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ದುರಂತ : ಯುಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ
    ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ದುರಂತ : ಯುಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ
  • ತೆಂಗು ಮತ್ತು ಅಡಿಕೆ ಬೆಳೆಯ ಸಮಗ್ರ ರೋಗ ನಿರ್ವಹಣೆ ಮಾಹಿತಿ ಕಾರ್ಯಕ್ರಮ
    ತೆಂಗು ಮತ್ತು ಅಡಿಕೆ ಬೆಳೆಯ ಸಮಗ್ರ ರೋಗ ನಿರ್ವಹಣೆ ಮಾಹಿತಿ ಕಾರ್ಯಕ್ರಮ

Designed by Elegant Themes | Powered by WordPress

error: Content is protected !!