ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ

Posted by Bantwala Isiri News | Feb 19, 2026 | ಬಂಟ್ವಾಳ | 0 |

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ

ವಾಷಿಂಗ್ಟನ್‌: ಇರಾನ್‌ (Iran) ಮೇಲೆ ಅಮೆರಿಕ(USA) ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಅಮೆರಿಕ ತನ್ನ ಬಳಿ ಇರುವ ಅತ್ಯಾಧುನಿಕ ಎಫ್‌-35, ಎಫ್‌-16 ಯುದ್ಧ ವಿಮಾನಗಳನ್ನು (Fighter Jet) ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿದೆ. ಇದನ್ನೂ ಓದಿ :  ರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ

2003ರ ಇರಾಕ್‌(Iraq) ವಿರುದ್ಧ ದಾಳಿಗೆ ನಿಯೋಜನೆಗೊಂಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯುದ್ಧ ವಿಮಾನಗಳನ್ನು ಅಮೆರಿಕ ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿದೆ. ಯುದ್ಧ ವಿಮಾನಗಳನ್ನು ತುಂಬಿದ ಎರಡನೇ ವಿಮಾನವಾಹಕ ನೌಕೆಯೂ ಈಗ ಈ ಪ್ರದೇಶಕ್ಕೆ ಬರುತ್ತಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ವರದಿಯ ಪ್ರಕಾರ ಅಮೆರಿಕ ದಾಳಿ ನಡೆಸಲು ಸನ್ನದ್ಧ ರೀತಿಯಲ್ಲಿದ್ದು ಅನುಮತಿಗಾಗಿ ಕಾಯುತ್ತಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದಾಳಿಗೆ ಅನುಮತಿ ನೀಡಿದರೆ ದಾಳಿ ನಡೆಸಲಿದೆ. ಇರಾನ್ ಮೇಲೆ ದಾಳಿ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ಟ್ರಂಪ್‌ ಇನ್ನೂ ನಿರ್ಧಾರ ಮಾಡಿಲ್ಲ. ಅನುಮತಿ ನೀಡಿದರೆ ಹಾನಿಯಾಗಿರುವ ಪರಮಾಣು ಸ್ಥಾವರ ಮತ್ತು ಕ್ಷಿಪಣಿಗಳನ್ನಿ ಸಂಗ್ರಹಿಸಿಟ್ಟಿರುವ ಜಾಗಗಳನ್ನು ನಾಶ ಮಾಡಲಿದೆ. ಕೊನೆಗೆ ಅಲ್ಲಿರುವ ಆಡಳಿತವನ್ನು ಉರುಳಿಸುವ ಸಾಧ್ಯತೆಯಿದೆ.

ಫ್ಲೈಟ್-ಟ್ರ್ಯಾಕಿಂಗ್ ಡೇಟಾದ ಪ್ರಕಾರ ಡಜನ್‌ಗಟ್ಟಲೇ ಯುಎಸ್ ಏರ್ ಫೋರ್ಸ್ ಫೈಟರ್ ಜೆಟ್‌ಗಳು, ಕಾರ್ಗೋ ವಿಮಾನಗಳು ಮತ್ತು ಹಲವು ಬೆಂಬಲ ವಿಮಾನಗಳು ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ಸ್ಥಳಾಂತರಗೊಂಡಿರುವುದನ್ನು ತೋರಿಸುತ್ತದೆ.

ಈ ಪೈಕಿ ಕೆಲವೊಂದು ಸಾಗುವ ದಾರಿಯಲ್ಲಿದೆ. ಮುಖ್ಯವಾಗಿ F-35s, F-15s, F-16s, F-22 ರಾಪ್ಟರ್ ಸ್ಟೆಲ್ತ್ ಫೈಟರ್ ಜೆಟ್‌ಗಳು, E-3 ಏರ್‌ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ ಮತ್ತು E-11 ಬ್ಯಾಟಲ್‌ಫೀಲ್ಡ್ ಏರ್‌ಬೋರ್ನ್ ಕಮ್ಯುನಿಕೇಷನ್ಸ್ ನೋಡ್ ವಿಮಾನಗಳು ಈಗ ಆಕಾಶದಲ್ಲಿ ಸಾಗುತ್ತಿವೆ.

ಅಮೆರಿಕದ ನೌಕಾಪಡೆಯು ಮಧ್ಯಪ್ರಾಚ್ಯ ಮತ್ತು ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ 13 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧ ರಕ್ಷಿಸುವ ಸಾಮರ್ಥ್ಯವಿರುವ ಒಂಬತ್ತು ವಿಧ್ವಂಸಕ ನೌಕೆಗಳು ಸೇರಿವೆ. ಎರಡನೇ ವಿಮಾನವಾಹಕ ನೌಕೆ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಮತ್ತು ನಾಲ್ಕು ವಿಧ್ವಂಸಕ ನೌಕೆಗಳು ಸಹ ಈ ಪ್ರದೇಶಕ್ಕೆ ತೆರಳುತ್ತಿವೆ.

Share:

Rate:

Previousಫಾಲ್ಗುಣಿ ನದಿಗೆ ಕೈಗಾರಿಕಾ ವಿಷಕಾರಿ ತ್ಯಾಜ್ಯ ಸೇರ್ಪಡೆ : ಜನವಸತಿ ಪ್ರದೇಶಗಳಲ್ಲಿ ಆರೋಗ್ಯದ ಆತಂಕ – ತಕ್ಷಣ ಕ್ರಮ ಕೈಗೊಳ್ಳುವಂತೆ ‘ಸುರಾಜ್ಯ ಅಭಿಯಾನ’ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
NextYenepoya Medical College Hospital Performs Mangalore’s First Tele-Robotic Surgery

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು

ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು

1 April 2024

ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ – ತಂದೆ, ಮೂವರು ಮಕ್ಕಳು ಸಾವು

ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ – ತಂದೆ, ಮೂವರು ಮಕ್ಕಳು ಸಾವು

1 October 2024

70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

9 October 2024

ಜೈ ಶ್ರೀರಾಮ್  ಒಡ್ಡೂರು ಫಾರ್ಮ್ಸ್ ನಲ್ಲಿ ಶ್ರೀ ಸತ್ಯನಾರಾಯಣ ಪೂಜೆ

ಜೈ ಶ್ರೀರಾಮ್ ಒಡ್ಡೂರು ಫಾರ್ಮ್ಸ್ ನಲ್ಲಿ ಶ್ರೀ ಸತ್ಯನಾರಾಯಣ ಪೂಜೆ

22 January 2024

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಬಸ್ಸ್ ನಲ್ಲಿ ಗುಪ್ತಾಂಗ ಪ್ರದರ್ಶಿಸಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ : ಉಪ್ಪಿನಂಗಡಿ ಮೂಲದ ಖಾಸಗಿ ಬಸ್‌ ಕಂಡಕ್ಟರ್ ಇರ್ಫಾನ್ ಬಂಧನ
    ಬಸ್ಸ್ ನಲ್ಲಿ ಗುಪ್ತಾಂಗ ಪ್ರದರ್ಶಿಸಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ : ಉಪ್ಪಿನಂಗಡಿ ಮೂಲದ ಖಾಸಗಿ ಬಸ್‌ ಕಂಡಕ್ಟರ್ ಇರ್ಫಾನ್ ಬಂಧನ
  • ಪ್ರಕೃತಿಯ ನಾಶ ಜಗತ್ತು ಸರ್ವನಾಶ: ನಾರಾಯಣ ಗುರುಗಳ ಸಂದೇಶ ನೆನಪಿಸಿದ – ದಿನೇಶ್ ಸುವರ್ಣ ರಾಯಿ
    ಪ್ರಕೃತಿಯ ನಾಶ ಜಗತ್ತು ಸರ್ವನಾಶ: ನಾರಾಯಣ ಗುರುಗಳ ಸಂದೇಶ ನೆನಪಿಸಿದ – ದಿನೇಶ್ ಸುವರ್ಣ ರಾಯಿ
  • ಸುಳ್ಯ: “ಅಧಿಕಾರ ಬಳಸಿಕೊಂಡು 2ನೇ ಮದುವೆಗೆ ಸಿದ್ಧತೆ”| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ
    ಸುಳ್ಯ: “ಅಧಿಕಾರ ಬಳಸಿಕೊಂಡು 2ನೇ ಮದುವೆಗೆ ಸಿದ್ಧತೆ”| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ
  • ರೈತರು, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ
    ರೈತರು, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ
  • ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್‌
    ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್‌
  • 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಬಂಗಾಳ ಪೊಲೀಸರ ಎನ್‌ಕೌಂಟರ್‌ಗೆ ಆರೋಪಿ ಬಲಿ
    11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಬಂಗಾಳ ಪೊಲೀಸರ ಎನ್‌ಕೌಂಟರ್‌ಗೆ ಆರೋಪಿ ಬಲಿ
  • ಪಚ್ಪದ್ರಾ ರಿಫೈನರಿ ರಾಷ್ಟ್ರಕ್ಕೆ ಸಮರ್ಪಣೆ: ರಾಜಸ್ಥಾನದಲ್ಲಿ ಭಾರತದ ಮೊದಲ ಗ್ರೀನ್‌ಫೀಲ್ಡ್ ಸಮಗ್ರ ರಿಫೈನರಿ-ಪೆಟ್ರೋಕೆಮಿಕಲ್ ಸಂಕೀರ್ಣ ಉದ್ಘಾಟನೆ
    ಪಚ್ಪದ್ರಾ ರಿಫೈನರಿ ರಾಷ್ಟ್ರಕ್ಕೆ ಸಮರ್ಪಣೆ: ರಾಜಸ್ಥಾನದಲ್ಲಿ ಭಾರತದ ಮೊದಲ ಗ್ರೀನ್‌ಫೀಲ್ಡ್ ಸಮಗ್ರ ರಿಫೈನರಿ-ಪೆಟ್ರೋಕೆಮಿಕಲ್ ಸಂಕೀರ್ಣ ಉದ್ಘಾಟನೆ
  • ಮಾಣಿ : ಗ್ರಾಮ ಸಭೆಯಲ್ಲಿ ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಪಿಡಿಒ
    ಮಾಣಿ : ಗ್ರಾಮ ಸಭೆಯಲ್ಲಿ ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಪಿಡಿಒ
  • ಬಂಟ್ವಾಳ:  ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆ: ಎಸ್‌ಐಆರ್ ಕಾರ್ಯ ಯಶಸ್ವಿಗೆ ಬೂತ್ ಮಟ್ಟದಲ್ಲಿ ಶ್ರಮಿಸುವಂತೆ ಕರೆ
    ಬಂಟ್ವಾಳ: ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆ: ಎಸ್‌ಐಆರ್ ಕಾರ್ಯ ಯಶಸ್ವಿಗೆ ಬೂತ್ ಮಟ್ಟದಲ್ಲಿ ಶ್ರಮಿಸುವಂತೆ ಕರೆ
  • ರಾಜಸ್ಥಾನಕ್ಕೆ ಮಹತ್ವದ ಅಭಿವೃದ್ಧಿ ಕೊಡುಗೆ: ಪಚ್ಪದ್ರಾ ರಿಫೈನರಿ ಹಾಗೂ ಜೋಧ್ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
    ರಾಜಸ್ಥಾನಕ್ಕೆ ಮಹತ್ವದ ಅಭಿವೃದ್ಧಿ ಕೊಡುಗೆ: ಪಚ್ಪದ್ರಾ ರಿಫೈನರಿ ಹಾಗೂ ಜೋಧ್ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

Designed by Elegant Themes | Powered by WordPress

error: Content is protected !!