ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ 3 ನೇ ದಿನದ ಪಾದಯಾತ್ರೆ ಆರಂಭಿಸುವ ಮುನ್ನ ಇಂದು ರಾಮನಗರದ ಐತಿಹಾಸಿಕ ಕೆಂಗಲ್ ಹನುಮಂತರಾಯ ಸ್ವಾಮಿಯ ದರ್ಶನಾಶೀರ್ವಾದ ಪಡೆದು ಮೈಸೂರು ಚಲೋ ಆರಂಭಿಸಲಾಯಿತು.

ಐತಿಹಾಸಿಕ ಕೆಂಗಲ್ ಹನುಮಂತರಾಯ ಸ್ವಾಮಿಯ ದರ್ಶನ ಮಾಡಿ 3 ನೇ ದಿನದ ಪಾದಯಾತ್ರೆಗೆ ಚಾಲನೆ

ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗಿಸುವ ಶಕ್ತಿ ಲಭಿಸುವ ಅಚಲ ವಿಶ್ವಾಸದೊಂದಿಗೆ ಹೆಜ್ಜೆ ಹಾಕೋಣ ಎಂದು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಗಳಾದ ಶ್ರೀ @drashwathcn, ಮಾಜಿ ಸಚಿವರಾದ ಶ್ರೀ ಸಿ.ಸಿ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ @nrkbjp, ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಎ.ಎಸ್.ಪಾಟೀಲ್ ನಡಹಳ್ಳಿ, ಶಾಸಕರಾದ ಶ್ರೀ ಬಸವರಾಜ ಮತ್ತೀಮಡು, ಶ್ರೀ ಹೆಚ್.ಕೆ.ಸುರೇಶ್, ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.