ಬೆಂಗಳೂರು (ಜೂ.17): ದೇಶದ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ ಒಟ್ಟು 6 ಸಾವಿರ ರೂಪಾಯಿಗಳನ್ನು ತಲಾ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕಳೆದ ಕೆಲವು ದಿನಗಳಿಂದ 23ನೇ ಕಂತಿನ ಹಣ ಯಾವಾಗ ಬರಬಹುದು ಎಂದು ಕಾಯುತ್ತಿದ್ದ ರೈತರಿಗೆ ಈಗ ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ಅನ್ನದಾತರಿಗೆ ಇನ್ನು ಕೇವಲ ಮೂರೇ ದಿನಗಳಲ್ಲಿ ಪಿಎಂ ಕಿಸಾನ್ ಹಣ ಸಿಗಲಿದೆ.  ಇದನ್ನೂ ಓದಿ :  ಡ್ರಗ್ಸ್‌ ನೀಡಿ ಮಹಿಳೆ ಮೇಲೆ ಅತ್ಯಾಚಾರ, ಬಲವಂತದ ಮತಾಂತರ; ಇಬ್ಬರು ಅರೆಸ್ಟ್‌

ಈಗಾಗಲೇ ರೈತರ ಖಾತೆ ಸೇರಿವೆ 22 ಕಂತುಗಳು

  • ಅರ್ಹ ರೈತರಿಗೆ ಈ ಬಾರಿ ಯೋಜನೆಯ 23ನೇ ಕಂತಿನ ಹಣವನ್ನು ವಿತರಿಸಲಾಗುತ್ತಿದೆ.
  • ಇದಕ್ಕೂ ಮುನ್ನ ರೈತರ ಖಾತೆಗಳಿಗೆ ಯಶಸ್ವಿಯಾಗಿ ಒಟ್ಟು 22 ಕಂತುಗಳನ್ನು ಜಮಾ ಮಾಡಲಾಗಿದೆ.
  • ಕಳೆದ 2026ರ ಮಾರ್ಚ್ 13 ರಂದು ಅಸ್ಸಾಂನ ಗುವಾಹಟಿಯಿಂದ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಣ ಬಿಡುಗಡೆ

ಪಿಎಂ ಕಿಸಾನ್ ಯೋಜನೆಯ ಕಂತನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ವಿತರಿಸಲಿದ್ದಾರೆ. ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಪಿಎಂ ಮೋದಿ ಅವರು ಡಿಬಿಟಿ (DBT – ನೇರ ನಗದು ವರ್ಗಾವಣೆ) ವ್ಯವಸ್ಥೆಯ ಮೂಲಕ ನೇರವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಿದ್ದಾರೆ.

23ನೇ ಕಂತು ಯಾವಾಗ? ಎಲ್ಲಿಂದ ಬಿಡುಗಡೆ?

ದಿನಾಂಕ: ಜೂನ್ 20, 2026 (ಶನಿವಾರ) ರಂದು 23ನೇ ಕಂತು ಬಿಡುಗಡೆಯಾಗಲಿದೆ