ಮುಖ್ಯಮಂತ್ರಿಯವರಿಗೆ ವಿಶೇಷ ಮನವರಿಕೆ ಮಾಡಿ, ‘ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ಯಡಿ ಜಿಲ್ಲೆಗೆ ಒಟ್ಟು 636 ಕಾಮಗಾರಿಗಳನ್ನು ತರಲಾಗಿದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಆರಂಭಿಸುವಲ್ಲಿ ವಿಳಂಬಧೋರಣೆ ತೋರದೆ, ಏಪ್ರಿಲ್ ಮಾಸಾಂತ್ಯದೊಳಗೆ ಆರಂಭಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಮಧುಗಿರಿ ವಿಭಾಗದ 137 ಕಾಮಗಾರಿಗಳು, ತುಮಕೂರು ವಿಭಾಗದ 86 ಕಾಮಗಾರಿಗಳು, ಪಿಡಬ್ಲ್ಯೂಡಿ ಮಧುಗಿರಿ ವಿಭಾಗದ 105 ಕಾಮಗಾರಿಗಳು, ತುಮಕೂರು ವಿಭಾಗದ 50 ಕಾಮಗಾರಿಗಳು ಹಾಗೂ ನಿರ್ಮಿತಿ ಕೇಂದ್ರ, ಕೆಆರ್ಐಡಿಎಲ್ನ 205 ಕಾಮಗಾರಿಗಳು ಸೇರಿದಂತೆ ಒಟ್ಟು 636 ಕಾಮಗಾರಿಗಳಿಗೆ ಮೊದಲ ಕಂತಿನ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿ, ಒಂದು ವರ್ಷದ ಹಿಂದೆಯೇ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆದಾಗ್ಯೂ ಕಾಮಗಾರಿಗಳನ್ನು ಆರಂಭಿಸಿಲ್ಲ ಮತ್ತು ಬಿಡುಗಡೆಯಾದ ಅನುದಾನವನ್ನು ವೆಚ್ಚ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದು, ಇಷ್ಟೂ ಅಧಿಕಾರಿಗಳಿಗೆ ಕಾರಣಕೇಳಿ ನೋಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.