ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ-ಮಧು ದಂಪತಿಯ ಪುತ್ರಿ ಗಗನ ಸಿಂಧು ಪೋಷಕರೊಂದಿಗೆ ಬಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. 

ಪೋಷಕರು ಖರೀದಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ಮಗು ಅಂಗಡಿಯ ಗ್ರಿಲ್ ಮೇಲೆ ಹತ್ತಿ ಆಟವಾಡುತ್ತಿತ್ತು. ಈ ವೇಳೆ ಒಂದೆರಡು ಬಾರಿ ತಾಯಿ ಮಗುವನ್ನು ಒಳಗೆ ಕರೆದುಕೊಂಡು ಹೋಗಿದ್ದರು. ಆದರೂ ಮತ್ತೆ ಗ್ರಿಲ್ ಬಳಿ ಬಂದಿದ್ದ ಬಾಲಕಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ.

ತಕ್ಷಣವೇ ಗಾಯಗೊಂಡ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಅಂಗಡಿ ಮಾಲೀಕರಾದ ನಾರಾಯಣಸಿಂಗ್ ಹಾಗೂ ರೋಹಿತ್ ಮಾತನಾಡಿದ್ದು, ಮೂರ್ನಾಲ್ಕು ಬಾರಿ ಹೊರಗಡೆ ಮಗು ಹೋಗಿತ್ತು. ಈ ವೇಳೆ ತಾಯಿ ಎರಡು, ಮೂರು ಬಾರಿ ಮಗುವನ್ನು ಕರೆದುಕೊಂಡು ಬಂದಿದ್ದರು. ಆದರೂ ಕೊನೆಗೆ ಮಗು ಕೆಳಗೆ ಬಿದ್ದಿದೆ ಎಂದಿದ್ದಾರೆ.