ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ

Posted by Bantwala Isiri News | Feb 19, 2026 | ಬಂಟ್ವಾಳ | 0 |

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ

ವಾಷಿಂಗ್ಟನ್‌: ಇರಾನ್‌ (Iran) ಮೇಲೆ ಅಮೆರಿಕ(USA) ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಅಮೆರಿಕ ತನ್ನ ಬಳಿ ಇರುವ ಅತ್ಯಾಧುನಿಕ ಎಫ್‌-35, ಎಫ್‌-16 ಯುದ್ಧ ವಿಮಾನಗಳನ್ನು (Fighter Jet) ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿದೆ. ಇದನ್ನೂ ಓದಿ :  ರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ

2003ರ ಇರಾಕ್‌(Iraq) ವಿರುದ್ಧ ದಾಳಿಗೆ ನಿಯೋಜನೆಗೊಂಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯುದ್ಧ ವಿಮಾನಗಳನ್ನು ಅಮೆರಿಕ ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿದೆ. ಯುದ್ಧ ವಿಮಾನಗಳನ್ನು ತುಂಬಿದ ಎರಡನೇ ವಿಮಾನವಾಹಕ ನೌಕೆಯೂ ಈಗ ಈ ಪ್ರದೇಶಕ್ಕೆ ಬರುತ್ತಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ವರದಿಯ ಪ್ರಕಾರ ಅಮೆರಿಕ ದಾಳಿ ನಡೆಸಲು ಸನ್ನದ್ಧ ರೀತಿಯಲ್ಲಿದ್ದು ಅನುಮತಿಗಾಗಿ ಕಾಯುತ್ತಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದಾಳಿಗೆ ಅನುಮತಿ ನೀಡಿದರೆ ದಾಳಿ ನಡೆಸಲಿದೆ. ಇರಾನ್ ಮೇಲೆ ದಾಳಿ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ಟ್ರಂಪ್‌ ಇನ್ನೂ ನಿರ್ಧಾರ ಮಾಡಿಲ್ಲ. ಅನುಮತಿ ನೀಡಿದರೆ ಹಾನಿಯಾಗಿರುವ ಪರಮಾಣು ಸ್ಥಾವರ ಮತ್ತು ಕ್ಷಿಪಣಿಗಳನ್ನಿ ಸಂಗ್ರಹಿಸಿಟ್ಟಿರುವ ಜಾಗಗಳನ್ನು ನಾಶ ಮಾಡಲಿದೆ. ಕೊನೆಗೆ ಅಲ್ಲಿರುವ ಆಡಳಿತವನ್ನು ಉರುಳಿಸುವ ಸಾಧ್ಯತೆಯಿದೆ.

ಫ್ಲೈಟ್-ಟ್ರ್ಯಾಕಿಂಗ್ ಡೇಟಾದ ಪ್ರಕಾರ ಡಜನ್‌ಗಟ್ಟಲೇ ಯುಎಸ್ ಏರ್ ಫೋರ್ಸ್ ಫೈಟರ್ ಜೆಟ್‌ಗಳು, ಕಾರ್ಗೋ ವಿಮಾನಗಳು ಮತ್ತು ಹಲವು ಬೆಂಬಲ ವಿಮಾನಗಳು ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ಸ್ಥಳಾಂತರಗೊಂಡಿರುವುದನ್ನು ತೋರಿಸುತ್ತದೆ.

ಈ ಪೈಕಿ ಕೆಲವೊಂದು ಸಾಗುವ ದಾರಿಯಲ್ಲಿದೆ. ಮುಖ್ಯವಾಗಿ F-35s, F-15s, F-16s, F-22 ರಾಪ್ಟರ್ ಸ್ಟೆಲ್ತ್ ಫೈಟರ್ ಜೆಟ್‌ಗಳು, E-3 ಏರ್‌ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ ಮತ್ತು E-11 ಬ್ಯಾಟಲ್‌ಫೀಲ್ಡ್ ಏರ್‌ಬೋರ್ನ್ ಕಮ್ಯುನಿಕೇಷನ್ಸ್ ನೋಡ್ ವಿಮಾನಗಳು ಈಗ ಆಕಾಶದಲ್ಲಿ ಸಾಗುತ್ತಿವೆ.

ಅಮೆರಿಕದ ನೌಕಾಪಡೆಯು ಮಧ್ಯಪ್ರಾಚ್ಯ ಮತ್ತು ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ 13 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧ ರಕ್ಷಿಸುವ ಸಾಮರ್ಥ್ಯವಿರುವ ಒಂಬತ್ತು ವಿಧ್ವಂಸಕ ನೌಕೆಗಳು ಸೇರಿವೆ. ಎರಡನೇ ವಿಮಾನವಾಹಕ ನೌಕೆ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಮತ್ತು ನಾಲ್ಕು ವಿಧ್ವಂಸಕ ನೌಕೆಗಳು ಸಹ ಈ ಪ್ರದೇಶಕ್ಕೆ ತೆರಳುತ್ತಿವೆ.

Share:

Rate:

Previousಫಾಲ್ಗುಣಿ ನದಿಗೆ ಕೈಗಾರಿಕಾ ವಿಷಕಾರಿ ತ್ಯಾಜ್ಯ ಸೇರ್ಪಡೆ : ಜನವಸತಿ ಪ್ರದೇಶಗಳಲ್ಲಿ ಆರೋಗ್ಯದ ಆತಂಕ – ತಕ್ಷಣ ಕ್ರಮ ಕೈಗೊಳ್ಳುವಂತೆ ‘ಸುರಾಜ್ಯ ಅಭಿಯಾನ’ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
NextYenepoya Medical College Hospital Performs Mangalore’s First Tele-Robotic Surgery

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಕಲ್ಲಡ್ಕ, ಗೋಳ್ತಮಜಲ್ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲ್ಲಡ್ಕ, ಗೋಳ್ತಮಜಲ್ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

14 February 2026

ಎಸ್.ವಿ.ಎಸ್.  ಆರ್ಮಿವಿಂಗ್ (ಜೆಡಿ/ಜೆಡ್ಲ್ಯೂ) ಎನ್.ಸಿ.ಸಿ. ಘಟಕ ಪ್ರಾರಂಭಿಸಲು ಅನುಮತಿ

ಎಸ್.ವಿ.ಎಸ್. ಆರ್ಮಿವಿಂಗ್ (ಜೆಡಿ/ಜೆಡ್ಲ್ಯೂ) ಎನ್.ಸಿ.ಸಿ. ಘಟಕ ಪ್ರಾರಂಭಿಸಲು ಅನುಮತಿ

2 July 2025

ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ

ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ

26 August 2025

ಪೊಳಲಿ : ನೂತನ ಅನ್ನಛತ್ರ, ಸಭಾಂಗಣ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ.

ಪೊಳಲಿ : ನೂತನ ಅನ್ನಛತ್ರ, ಸಭಾಂಗಣ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ.

4 July 2026

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಕೊಡಗು | ನಾಯಿ ಅಟ್ಟಿಸಿಕೊಂಡು ಬಂದಿದ್ದ ಕಾಡಾನೆ ದಾಳಿಗೆ ಸಿಕ್ಕಿ ಬೆಂಗಳೂರು ಪ್ರವಾಸಿಗ ಬಲಿ
    ಕೊಡಗು | ನಾಯಿ ಅಟ್ಟಿಸಿಕೊಂಡು ಬಂದಿದ್ದ ಕಾಡಾನೆ ದಾಳಿಗೆ ಸಿಕ್ಕಿ ಬೆಂಗಳೂರು ಪ್ರವಾಸಿಗ ಬಲಿ
  • ಜೈಲಿಂದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಸ್ಪತ್ರೆಗೆ ಶಿಫ್ಟ್‌
    ಜೈಲಿಂದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಸ್ಪತ್ರೆಗೆ ಶಿಫ್ಟ್‌
  • ಬಿಳಿ ಅಥವಾ ಕಂದು ಮೊಟ್ಟೆ : ವ್ಯತ್ಯಾಸವೇನು, ಮತ್ತು ಯಾವುದು ಉತ್ತಮ? ತಜ್ಞರ ಅಭಿಪ್ರಾಯ ಏನು ?
    ಬಿಳಿ ಅಥವಾ ಕಂದು ಮೊಟ್ಟೆ : ವ್ಯತ್ಯಾಸವೇನು, ಮತ್ತು ಯಾವುದು ಉತ್ತಮ? ತಜ್ಞರ ಅಭಿಪ್ರಾಯ ಏನು ?
  • ಕಂದಾಯ ಸಚಿವ ಆನಗಣಿ ಸತ್ಯ ಪ್ರಸಾದ್ ಅವರಿಂದ ಪ್ರಶಂಸಾ ಪತ್ರ ಸ್ವೀಕರಿಸುತ್ತಿರುವ ಆಟೋ ರಿಕ್ಷಾ ಚಾಲಕ ಯು.ಸುಂದರ್ ರಾವ್.
    ಕಂದಾಯ ಸಚಿವ ಆನಗಣಿ ಸತ್ಯ ಪ್ರಸಾದ್ ಅವರಿಂದ ಪ್ರಶಂಸಾ ಪತ್ರ ಸ್ವೀಕರಿಸುತ್ತಿರುವ ಆಟೋ ರಿಕ್ಷಾ ಚಾಲಕ ಯು.ಸುಂದರ್ ರಾವ್.
  • ಗದಗ ಜಿಲ್ಲೆಯ  ಕರ್ನಲ್ ಸ್ಪೂರ್ತಿ ಕುಲಕರ್ಣಿ, ಗಡಿ ರಸ್ತೆಗಳ ಸಂಘಟನೆಯ (BRO) 45 ನೇ ಕಾರ್ಯಪಡೆಗೆ ಕಮಾಂಡ್ ಆದ ಮೊದಲ ಮಹಿಳಾ ಸೇನಾ ಅಧಿಕಾರಿ
    ಗದಗ ಜಿಲ್ಲೆಯ ಕರ್ನಲ್ ಸ್ಪೂರ್ತಿ ಕುಲಕರ್ಣಿ, ಗಡಿ ರಸ್ತೆಗಳ ಸಂಘಟನೆಯ (BRO) 45 ನೇ ಕಾರ್ಯಪಡೆಗೆ ಕಮಾಂಡ್ ಆದ ಮೊದಲ ಮಹಿಳಾ ಸೇನಾ ಅಧಿಕಾರಿ
  • Special, as always..! ಇನ್ಸ್ಟಾದಲ್ಲಿ ತಮ್ಮ ಕ್ಯೂಟ್‌ ಸ್ನೇಹಿತರನ್ನು ಪರಿಚಯಿಸಿದ ಮೋದಿ
    Special, as always..! ಇನ್ಸ್ಟಾದಲ್ಲಿ ತಮ್ಮ ಕ್ಯೂಟ್‌ ಸ್ನೇಹಿತರನ್ನು ಪರಿಚಯಿಸಿದ ಮೋದಿ
  • ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌ – ದರ್ಶನ್‌ಗೆಒಂದು ವಾರ ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸದಂತೆ ಕೋರ್ಟ್‌ ಸೂಚನೆ
    ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌ – ದರ್ಶನ್‌ಗೆಒಂದು ವಾರ ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸದಂತೆ ಕೋರ್ಟ್‌ ಸೂಚನೆ
  • 🌾 ಯುವಜನತೆ ಕೃಷಿಯತ್ತ ಒಲವು ಬೆಳೆಸಿಕೊಳ್ಳಲಿ -ಶಾಸಕ ರಾಜೇಶ್ ನಾಯ್ಕ್
    🌾 ಯುವಜನತೆ ಕೃಷಿಯತ್ತ ಒಲವು ಬೆಳೆಸಿಕೊಳ್ಳಲಿ -ಶಾಸಕ ರಾಜೇಶ್ ನಾಯ್ಕ್
  • ಬಿಜೆಪಿ ಬಂಟ್ವಾಳ ಮಹಿಳಾ ಮೋರ್ಚಾದಿಂದ ‘ಆಟಿದ ಗಮ್ಮತ್ತು’ ವಿನೂತನ ಕಾರ್ಯಕ್ರಮ
    ಬಿಜೆಪಿ ಬಂಟ್ವಾಳ ಮಹಿಳಾ ಮೋರ್ಚಾದಿಂದ ‘ಆಟಿದ ಗಮ್ಮತ್ತು’ ವಿನೂತನ ಕಾರ್ಯಕ್ರಮ
  • ರೇಣುಕಾಸ್ವಾಮಿ ಒಳ ಉಡುಪನ್ನು ತೆಗೆದು ದರ್ಶನ್‌ ಹೊಡೆದಿದ್ದರು – ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
    ರೇಣುಕಾಸ್ವಾಮಿ ಒಳ ಉಡುಪನ್ನು ತೆಗೆದು ದರ್ಶನ್‌ ಹೊಡೆದಿದ್ದರು – ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?

Designed by Elegant Themes | Powered by WordPress

error: Content is protected !!