
ಇದೇ ವೇಳೆ “ಮಹಿಳಾ ನೌಕರರಿಗಾಗಿ ಋತುಚಕ್ರ ರಜೆ” ಘೋಷಿಸಿರುವ ನಮ್ಮ ಸರ್ಕಾರದ ನಿರ್ಧಾರಕ್ಕೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದವರು ಮಾನ್ಯಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಅವರನ್ನು ಸನ್ಮಾನಿಸಿ, ಧನ್ಯವಾದ ತಿಳಿಸಿದರು.
ಋತುಚಕ್ರದ ಸಮಯದಲ್ಲಿ ಉದ್ಯೋಗಸ್ಥ ಮಹಿಳೆಯರು ಅನುಭವಿಸುವ ನೋವು, ವೇದನೆಯನ್ನು ಮನಗಂಡು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಿಗೊಂದು ವೇತನ ಸಹಿತ ಋತುಚಕ್ರ ರಜೆ ನೀಡುವ ಐತಿಹಾಸಿಕ ತೀರ್ಮಾನವನ್ನು ದೇಶದಲ್ಲೇ ಮೊದಲ ಬಾರಿಗೆ ನಾವು ಕೈಗೊಂಡಿದ್ದು, ನಾಡಿನ ನನ್ನ ಲಕ್ಷಾಂತರ ಅಕ್ಕ – ತಂಗಿಯರ ವೃತ್ತಿಬದುಕಿನಲ್ಲಿ ಹೊಸ ಬದಲಾವಣೆಗೆ ಕಾರಣವಾದ ಸಂತೃಪ್ತಭಾವ ನನ್ನದು ಎಂದರು.


