ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ 15ನೇ ಪದವಿ ಪ್ರದಾನ ಸಮಾರಂಭವು ನವೆಂಬರ್ 15ರಂದು ವಿಶ್ವವಿದ್ಯಾನಿಲಯದ ದೇರಳಕಟ್ಟೆಯ ಕ್ಯಾಂಪಸ್  ನಲ್ಲಿರುವ ಯೆಂಡ್ಯುರನ್ಸ್ ಝೋನ್ನಲ್ಲಿ ನಡೆಯಲಿದೆ.

ಪ್ರೊ. ಸಾಂತಿಶ್ರೀ ಧೂಳಿಪುಡಿ ಪಂಡಿತ್, ಉಪಕುಲಪತಿ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆ ಏನ್ ಯು), ನವದೆಹಲಿ, ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿ, ಪದವಿ ಪ್ರದಾನ ಭಾಷಣವನ್ನು ನೀಡಲಿದ್ದಾರೆ.
ಡಾ. ತಸ್ಲಿಮ್ ಅರಿಫ್ ಸಯೀದ್, ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮೊಲಿಕ್ಯುಲರ್ ಪ್ಲಾಟ್ಫಾರ್ಮ್ಸ್ (ಸಿ-ಕ್ಯಾಂಪ್), ಬೆಂಗಳೂರು, ಅವರು ಗೌರವ ಅತಿಥಿಯಾಗಿ ಸಮಾರಂಭವನ್ನು ಅಲಂಕರಿಸಲಿದ್ದಾರೆ. ಇದನ್ನೂ ಓದಿ; ಮಾನವೀಯ ಮೌಲ್ಯ ಜೀವಂತವಾಗಿರುವಲ್ಲಿ ಗುರುಗಳ ಪಾತ್ರ ಮಹತ್ತರ – ಡಾ.ತ್ರಿವೇಣಿ

ಈ ಸಮಾರಂಭ ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)ದ ಕುಲಪತಿ ಡಾ. ಯೆನಪೋಯ ಅಬ್ದುಲ್ಲಾ  ಕುಂಞಿ   ಅವರು ವಹಿಸಲಿದ್ದಾರೆ. ಡಾ. ಎಂ. ವಿಜಯಕುಮಾರ್, ಉಪಕುಲಪತಿ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ಅವರು ವಿಶ್ವವಿದ್ಯಾನಿಲಯದ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಲಿದ್ದಾರೆ.

ದಂತ, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಹೋಮಿಯೋಪತಿ, ವಿಜ್ಞಾನ, ಕಲೆ ಮತ್ತು ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್ ಮುಂತಾದ ವಿವಿಧ ವಿಭಾಗಗಳಿಂದ ಚಿನ್ನದ ಪದಕ ವಿಜೇತರು, ಪಿಎಚ್‌ಡಿ ವಿದ್ವಾಂಸರು ಮತ್ತು ಪದವಿ ಪಡೆದವರು ಸೇರಿದಂತೆ ಒಟ್ಟು 3,729 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಗುವುದು.