ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

Posted by Bantwala Isiri News | Feb 16, 2026 | ಬಂಟ್ವಾಳ | 0 |

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

– ಹುಡುಗಿಯರ ಹಣದಲ್ಲೇ ದಿಲ್ದಾರ್‌ ಮಾಡ್ತಿದ್ದ ʻಮಂಗಳೂರು ಮನ್ಮಥʼ
– ಹೆಂಡ್ತಿ ಓಡಿಹೋಗಿದ್ದಾಳೆ ಅಂತ ಅನ್ಯ ಯುವತಿಯರ ಜೊತೆಗೆ ಚಕ್ಕಂದ

ಮಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಪರಿಚಯ ಮಾಡಿಕೊಂಡು ಮದ್ವೆಯಾಗಿ ನಂಬಿಸಿ ಹಣ ವಂಚಿಸಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ʻಮಂಗಳೂರು ಮನ್ಮಥʼನ ಪ್ರಕರಣ ಬೆಳಕಿಗೆ ಬಂದಿದೆ. ಈತ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಅನ್ನೋದು ಗೊತ್ತಾಗಿದೆ.

ಗಂಡನ ಪ್ರೀತಿ, ಪ್ರೇಮ, ಪ್ರಣಯದಾಟವನ್ನ ಸ್ವತಃ ಪತ್ನಿಯೇ ಬಟಾಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ (Mangaluru Women Police Station) ದೂರು ನೀಡಿದ್ದಾರೆ.

ಸಂತ್ರಸ್ತೆ ಪ್ರೀತಿ ಎಂಬಾಕೆಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ಆರೋಪಿ ಪತಿ ಮನೀಶ್​​, ಬ್ಲ್ಯಾಕ್​​ಮೇಲ್​​ ಮಾಡಿ ಆಕೆಯನ್ನ ಮದುವೆ ಆಗಿದ್ದನಂತೆ. ಮದುವೆಗೆ ಮೂರು ದಿನ ಬಾಕಿಯಿರುವಾಗಲೇ ಹಣ ಇಲ್ಲ ಅಂತ ಆತ್ಮಹತ್ಯೆ ನಾಟಕವಾಡಿದ್ದಾನೆ. ಇದನ್ನ ನಂಬಿ ಮದ್ವೆಗೆ ಎಲ್ಲ ಖರ್ಚನ್ನ ತಾವೇ ನೋಡಿಕೊಂಡು ಪ್ರೀತಿ (Preeti) ಪೋಷಕರು ವಿವಾಹ ಕಾರ್ಯ ನಡೆಸಿಕೊಟ್ಟಿದ್ದರು. ಅಲ್ಲದೇ 2 ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್​​ಗೆ ಕೆಲಸ ಕೊಡಿಸಲು ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್​​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ.

ವಿಚಾರ ತಿಳಿದ ಪ್ರೀತಿ, ಮನೀಶ್‌ನ ಪುರಾಣ ಕೆದಕಲು ಶುರು ಮಾಡಿದ್ದಾರೆ. ಈ ವೇಳೆ ಮನೀಶ್​​ನ ನಿಜರೂಪ ಬಯಲಾಗಿದೆ. ಮದ್ವೆಗೂ ಮುನ್ನ ಅನೇಕ ಯುವತಿಯರ ಜೊತೆಗೆ ಚಕ್ಕಂದ ಆಡಿರೋದು ಗೊತ್ತಾಗಿದೆ.

ಹೌದು. ಪ್ರೀತಿ ಜೊತೆ ಮದುವೆಗೂ (Marriage) ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್​​ ಹೊಂದಿದ್ದ ಮನೀಶ್​​, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನ ಆ ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ. ಹಣ ವಾಪಾಸ್ ಕೇಳಿದ್ರೆ ಎಲ್ಲ ಯುವತಿಯರ ಬಳಿ ಒಂದೇ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್​ ಟ್ಯೂಮರ್ ಇದೆ, ಹಾರ್ಟ್‌ನಲ್ಲಿ ತೂತಿದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಳ್ತಿದ್ದ ಎಂದು ದೂರಿನಲ್ಲಿ ಪ್ರೀತಿ ತಿಳಿಸಿದ್ದಾರೆ.

ಟಿಕ್ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡೆತೆಯಿಂದ ಬೇಸತ್ತ ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ.

Share:

Rate:

Previousರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ
Nextಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಕಲ್ಲಡ್ಕ ಮಾದರಿ ಶಾಲೆ ಉತ್ಸವ 2023 ಕಾರ್ಯಕ್ರಮಕ್ಕೆ ಚಾಲನೆ

ಕಲ್ಲಡ್ಕ ಮಾದರಿ ಶಾಲೆ ಉತ್ಸವ 2023 ಕಾರ್ಯಕ್ರಮಕ್ಕೆ ಚಾಲನೆ

29 December 2023

ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಬಸ್‌ ಪಾಸ್‌ ಅವಧಿಯನ್ನು ಏಪ್ರಿಲ್‌ 10ರ ವರೆಗೆ ವಿಸ್ತರಣೆ

ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಬಸ್‌ ಪಾಸ್‌ ಅವಧಿಯನ್ನು ಏಪ್ರಿಲ್‌ 10ರ ವರೆಗೆ ವಿಸ್ತರಣೆ

4 April 2026

ಸಜೀಪ ಮುನ್ನೂರು ಮೂರ್ತೆದಾರರ ಸೇ.ಸ.ಸಂಘ ಇ -ಸ್ಟಾಂಪ್ ಸೌಲಭ್ಯ ಚಾಲನೆ

ಸಜೀಪ ಮುನ್ನೂರು ಮೂರ್ತೆದಾರರ ಸೇ.ಸ.ಸಂಘ ಇ -ಸ್ಟಾಂಪ್ ಸೌಲಭ್ಯ ಚಾಲನೆ

27 June 2024

ಲಕ್ಷುರಿ ಎಂಜಿ ವಿಂಡ್ಸರ್ ಕಾರಿನ ಬೆಲೆ ರಿವೀಲ್

ಲಕ್ಷುರಿ ಎಂಜಿ ವಿಂಡ್ಸರ್ ಕಾರಿನ ಬೆಲೆ ರಿವೀಲ್

27 September 2024

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಜನಜಾತಿಯ ಗರಿಮಾ ಉತ್ಸವ 2026 ಅಂಗವಾಗಿ ಜನರ ಕುಂದುಕೊರತೆ ಅಲಿಕೆ ಕಾರ್ಯಕ್ರಮ
    ಜನಜಾತಿಯ ಗರಿಮಾ ಉತ್ಸವ 2026 ಅಂಗವಾಗಿ ಜನರ ಕುಂದುಕೊರತೆ ಅಲಿಕೆ ಕಾರ್ಯಕ್ರಮ
  • ಭಾರತ-ಇಟಲಿ ಸಂಬಂಧಗಳ ಕುರಿತು ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಜಂಟಿಯಾಗಿ ಸಂಪಾದಕೀಯ ಲೇಖನ ಬರೆದ ಪ್ರಧಾನಮಂತ್ರಿ
    ಭಾರತ-ಇಟಲಿ ಸಂಬಂಧಗಳ ಕುರಿತು ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಜಂಟಿಯಾಗಿ ಸಂಪಾದಕೀಯ ಲೇಖನ ಬರೆದ ಪ್ರಧಾನಮಂತ್ರಿ
  • ಪ್ರಧಾನಿ ಮೋದಿ ‘ಹಾವಾಡಿಗ’ನಾಗಿ ಚಿತ್ರಿಸಿದ ನಾರ್ವೆ ಪತ್ರಿಕೆ – ಭಾರತೀಯರ ತೀವ್ರ ಆಕ್ರೋಶ
    ಪ್ರಧಾನಿ ಮೋದಿ ‘ಹಾವಾಡಿಗ’ನಾಗಿ ಚಿತ್ರಿಸಿದ ನಾರ್ವೆ ಪತ್ರಿಕೆ – ಭಾರತೀಯರ ತೀವ್ರ ಆಕ್ರೋಶ
  • ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ
    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ
  • ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ (ನಿವೃತ್ತ) ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
    ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ (ನಿವೃತ್ತ) ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
  • ಸಿಡಿಲು ಬಡಿದು ಹಾನಿಯಾಗಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು  ಭೇಟಿ
    ಸಿಡಿಲು ಬಡಿದು ಹಾನಿಯಾಗಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
  • ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
    ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ
  • ಅಫ್ಸ್ಲೈಟ್‌ಡೈಕ್ (Afsluitdijk) ಅಣೆಕಟ್ಟಿಗೆ ಭೇಟಿ ನೀಡಿದ ಪ್ರಧಾನಮಂತ್ರಿ
    ಅಫ್ಸ್ಲೈಟ್‌ಡೈಕ್ (Afsluitdijk) ಅಣೆಕಟ್ಟಿಗೆ ಭೇಟಿ ನೀಡಿದ ಪ್ರಧಾನಮಂತ್ರಿ
  • Yenepoya Nursing College celebrated International Nurses Day 2026
    Yenepoya Nursing College celebrated International Nurses Day 2026
  • ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ದುರಸ್ತಿ ಶ್ರಮದಾನ ಹಾಗೂ ಮಾಸಿಕ ಸಭೆ
    ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ದುರಸ್ತಿ ಶ್ರಮದಾನ ಹಾಗೂ ಮಾಸಿಕ ಸಭೆ

Designed by Elegant Themes | Powered by WordPress

error: Content is protected !!