ಗ್ರಾಸ್ ಐಲೆಟ್(ಸೇಂಟ್ ಲೂಸಿಯಾ): ಟಿ20 ವಿಶ್ವಕಪ್ ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್ 8 ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ವಿಶ್ವ ದಾಖಲೆ (World Record) ಬರೆದಿದ್ದಾರೆ.

ಕೇವಲ 41 ಎಸೆತಗಳಲ್ಲಿ 91 ರನ್ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ಸುಂದರ ಇನ್ನಿಂಗ್ಸ್ ಬರೋಬ್ಬರಿ 8 ಸಿಕ್ಸ್, 7 ಬೌಂಡರಿ ಒಳಗೊಂಡಿತ್ತು. ರೋಹಿತ್ ಶರ್ಮಾ (Rohit Sharma) ಸಿಕ್ಸ್ ಮತ್ತು ಬೌಂಡರಿ ಮೂಲಕವೇ 76 ರನ್ ಗಳಿಸಿದರು.
ವಿರಾಟ್ ಕೊಹ್ಲಿ (Virat Kohli) ಶೂನ್ಯಕ್ಕೆ ಔಟಾದರೂ ರೋಹಿತ್ ಶರ್ಮಾ ಆಸೀಸ್ ಬೌಲರ್‌ಗಳನ್ನು ಬೆಂಡೆತ್ತಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಮಿಚೆಲ್ ಸ್ಟ್ರಾಕ್ ಎಸೆತದಲ್ಲಿ ಬೌಲ್ಡ್ ಔಟ್ ಆದರು.
ಅತಿ ಹೆಚ್ಚು ರನ್:
ಟಿ20 ಕ್ರಿಕೆಟ್ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 146 ಇನ್ನಿಂಗ್ಸ್‌ನಿಂದ 4,145 ರನ್ ಹೊಡೆದರೆ ರೋಹಿತ್ ಶರ್ಮಾ 149 ಇನ್ನಿಂಗ್ಸ್‌ನಿಂದ 4,165 ರನ್ ಹೊಡೆದಿದ್ದಾರೆ.
ನಾಯಕನಾಗಿ ವೇಗದ ಅರ್ಧಶತಕ 19 ಎಸೆತಗಳಲ್ಲಿ ರೋಹಿತ್ ಶರ್ಮಾ ಅರ್ಧಶತಕ ಹೊಡೆದರು. ಈ ಮೊದಲು 2007ರಲ್ಲಿ ಬಾಂಗ್ಲಾದ ಮೊಹಮ್ಮದ್ ಅಶ್ರಫುಲ್ 20 ಎಸೆತಗಳಲ್ಲಿ ಫಿಫ್ಟಿ ಹೊಡೆದಿದ್ದರು.
ಭಾರತದ ಪರ ಅತಿ ಹೆಚ್ಚು ಸಿಕ್ಸ್:
ಭಾರತದ ಪರ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಾಗಿ ರೋಹಿತ್ ಶರ್ಮಾ ಹೊರ ಹೊಮ್ಮಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ 7 ಸಿಕ್ಸ್ ಹೊಡೆದಿದ್ದರು. ಈ ಪಂದ್ಯದಲ್ಲಿ ಯುವರಾಜ್ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವದಾಖಲೆ ಬರೆದಿದ್ದರು.
