ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಬೈರ್ಲಚ್ಚಿಲ್ ಮನೆ, ರಾಮಕ್ಜು ಅವರ ಮನೆಯ ಮೇಲ್ಛಾವಣಿ ರಿಪೇರಿ ಶ್ರಮದಾನ ಧನುಪೂಜೆ ಶೌರ್ಯ ವೀಪತು ನಿರ್ವಹಣಾ ಘಟಕದ ನಾಲ್ಕು ಮಂದಿ ಸದಸ್ಯರು ಹಾಗೂ ಸ್ಥಳೀಯರ ಸಹಕಾರ ದೊಂದಿಗೆ ಏಪ್ರಿಲ್ 19 ನೇ ಆದಿತ್ಯವಾರ ನಡೆಸಲಾಯಿತು. ಇದನ್ನೂ ಓದಿ : ಭಾರತ-ಕೊರಿಯಾ ಗಣರಾಜ್ಯ ಇಂಧನ ಸಂಪನ್ಮೂಲ ಭದ್ರತೆ ಕುರಿತು ಜಂಟಿ ಹೇಳಿಕೆ

ದುರಸ್ಥಿ ಶ್ರಮದಾನಕ್ಕೆ ಬೇಕಾದ ಸಲಕರಣೆಗಳನ್ನು ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಜಿತ್ ಜೈನ್, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಶೌರ್ಯ ತಂಡದ ಸದಸ್ಯರಾದ ಜನಾರ್ದನ್ ನೀಡಿ ಸಹಕರಿಸಿದರು. ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ರೊನಾಲ್ಡ್ ಡಿಸೋಜಾರವರು ಚಾ ತಿಂಡಿ ಊಟದ ವ್ಯವಸ್ಥೆಯನ್ನು ನೀಡಿ ಸಹಕರಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್,ಮದ್ವ ಒಕ್ಕೂಟದ ಸೇವಪ್ರತಿನಿಧಿ ಸುಮಿತ್ರ,ಉಪಸ್ಥಿತರಿದ್ದರು.

ಶ್ರಮದಾನ ಸೇವೆಯಲ್ಲಿ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ‌ ರೇಖಾ.ಪಿ. ಸದಸ್ಯರುಗಳಾದ ಸಂಪತ್ ಶೆಟ್ಟಿ ರೋಹಿತ್ ಮಹಾಬಲ ರೈ ಅಶೋಕ ಹಾರೋದ್ದು ಮೋಹನಂದ ಅಶೋಕ ಬೊಲ್ಮರ್, ನಾರಾಯಣ ಪೂಜಾರಿ, ನಾರಾಯಣ ಶೆಟ್ಟಿ ಲಕ್ಷ್ಮಣ ಜನಾರ್ಧನ ಶಶಿಕಲ ಪವಿತ್ರ, ಧನುಪೂಜೆ ಶೌರ್ಯ ತಂಡ ಘಟಕದ ಸದಸ್ಯರುಗಳಾದ ಗಣೇಶ್ ಆಚಾರ್ಯ, ದಿನೇಶ್ ಆಚಾರ್ಯ,ಪ್ರಶಾಂತ್, ಪ್ರಮೋದ್ ಆಚಾರ್ಯ ಭಾಗವಹಿಸಿದ್ದರು.