ತುಳುನಾಡಿನಾದ್ಯಂತ ಪ್ರಸಿದ್ಧವಾದ ಅನಂತಾಡಿ ಮೆಚ್ಚಿ ಜಾತ್ರೆಗೆ ತೆರಳುವ ಮುಖ್ಯ ರಸ್ತೆ ಅಭಿವೃದ್ಧಿಗೆ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಯವರಿಂದ ಚಾಲನೆ ನೀಡಿದರು.
ಅನಂತಾಡಿ ಕಾರಂಬಲ್ಲೆಯಿಂದ-ಬಂಟ್ರಿಜ ಶ್ರೀ ಉಳ್ಳಾಲ್ತಿ ಮಾಡ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ ಅನುದಾನದ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಯವರು ಗುದ್ದಲಿ ಪೂಜೆ ನೆರವೇರಿಸಿದರು. ಅನಂತಾಡಿ ಮೆಚ್ಚಿ ಜಾತ್ರೆಗೆ ತೆರಳುವ ಈ ಮುಖ್ಯ ರಸ್ತೆ ಅಭಿವೃದ್ಧಿಗೊಂಡು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಇದನ್ನೂ ಓದಿ : ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ ಮಗು ; ಹಿಂತಿರುಗಿ ಬರುತ್ತಿದ್ದಾಗ ಕಾರು ಡಿಕ್ಕಿಯಾಗಿ ದಾರುಣ ಸಾವು
ಬಂಟ್ವಾಳ ಮಂಡಲ ಅಧ್ಯಕ್ಷರು ಆರ್ ಚೆನ್ನಪ್ಪ ಕೋಟ್ಯಾನ್ ಬಿಜೆಪಿ ಪ್ರಮುಖರಾದ ಮಾಧವ ಮಾವೆ,ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ,ನೇರಳಕಟ್ಟೆ ಕ್ರಷಿ ಪತ್ತಿನ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಪುಷ್ಪರಾಜ್ ಚೌಟ, ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಮ್ಟೂರ್., ಪಂಚಾಯತ್ ಅಧ್ಯಕ್ಷರು ಸುಜಾತಾ ಪೂಜಾರಿ, ಮಾಣಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಅರವಿಂದ ರೈ, ಪ್ರಧಾನಕಾರ್ಯದರ್ಶಿ ನಾಗೇಶ್ ಭಂಡಾರಿ ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರು ,ಕಾರ್ಯಕರ್ತರು ಉಪಸ್ಥಿತರಿದ್ದರು.
