ಇಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನೂತನ ಅಂಬೇಡ್ಕರ್ ಭವನವನ್ನು  ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು  ಉದ್ಘಾಟಿಸಿದರು.

ಇದೇ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗವಾನ್ ಬುದ್ಧನ ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ವೇಳೆ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ, ಶ್ರೀ ಸಿ. ಪುಟ್ಟರಂಗಶೆಟ್ಟಿ,‌ ಸಂಸದ ಶ್ರೀ ಸುನೀಲ್ ಬೋಸ್, ಶಾಸಕರಾದ ಶ್ರೀ ಎ. ಆರ್. ಕೃಷ್ಣಮೂರ್ತಿ, ಶ್ರೀ ಎಂ. ಆರ್. ಮಂಜುನಾಥ, ಶ್ರೀ ಹೆಚ್. ಎಂ. ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ. ತಿಮ್ಮಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಸಿ. ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.