ಹಾವೇರಿ: ಸಾರಿಗೆ ಬಸ್ (Bus) ಮತ್ತು ಲಾರಿ (Lorry) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 6 ಜನರಿಗೆ ಗಂಭೀರವಾದ ಘಟನೆ ಹಾವೇರಿ (Haveri) ತಾಲೂಕಿನ ಹಳೇರತ್ತಿ ಗ್ರಾಮದ ಬಳಿ ನಡೆದಿದೆ. ಇದನ್ನೂ ಓದಿ : ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಮತ್ತೆ ಬಿಗ್ ಶಾಕ್ – ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಜಾ
ಚನ್ನೂರು ಗ್ರಾಮದ ನಿವಾಸಿ ಎಸ್.ಎಸ್.ಮಠದ್ ಮೃತ ದುರ್ದೈವಿ. ಸಾರಿಗೆ ಬಸ್‌ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತೆಗೆ ರವಾನೆ ಮಾಡಲಾಗಿದೆ.
