ಬಂಟ್ವಾಳ: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ ನಿವಾರಣೆಗೆ ಹೋರಾಡಿದ ಮಹಾನ್ ಸಮಾಜ ಸುಧಾರಕ ವಿಶ್ವಗುರು ಬಸವೇಶ್ವರರು. ಅಂದು ಅನುಭವಮಂಟಪದ ಮೂಲಕ ಜಗತ್ತಿಗೆ ಸಮಾನತೆಯ ತತ್ತ÷್ವವನ್ನು ಬೋಧಿಸಿದ ಇವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಡಿ.ಮಂಚಿ ನುಡಿದರು.
ಇದನ್ನೂ ಓದಿ : ಯುವವಾಹಿನಿ ಸಂಸ್ಕೃತಿ ಬೆಳಗಿಸುವ ದಾರಿದೀಪ – ಭುವನೇಶ್ ಪಚ್ಚಿನಡ್ಕ
ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣಪ್ರಭು ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ನಿರೂಪಿಸಿ, ಸ್ವಾಗತಿಸಿದರು.