ಬಂಟ್ವಾಳ ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ‌ ಸಮರ್ಪಣೆ ಮಾಡಿದ ನೂತನ ಕೊಡಿಮರದ ( ಧ್ವಜ ಸ್ತಂಭ) ವೈಭವಪೂರ್ಣವಾದ ಮೆರವಣಿಗೆ ಹಾಗೂ ತೈಲಾಧಿವಾಸ ಕಾರ್ಯಕ್ರಮ ಫೆ.4 ನಡೆಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ‌ ದೈವಸ್ಥಾನದ ಆಡಳಿತ‌ ಸಮಿತಿ‌ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಉಪಸ್ಥಿತರಿದ್ದರು.

ಇದೇ ಮೊದಲ ಬಾರಿಗೆ ಭಕ್ತರು ಕೋಡಿಮರವನ್ನು ಬೆಳಿಗ್ಗೆ 7-30ರಿಂದ ಭುಜದಲ್ಲಿರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದು ದೈವಸ್ಥಾನಕ್ಕೆ ತಲುಪಿಸಿದರು. ಬಳಿಕ ಭಕ್ತಾಧಿಗಳು ತೈಲಾಧಿವಾಸ ಕಾರ್ಯಕ್ರಮ ನಡೆಸಿದರು.