ಕಲ್ಲಡ್ಕ : ವಿಕಸಿತ ಭಾರತ ಬಂಟ್ವಾಳ ಇದರ ವತಿಯಿಂದ “ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ” ಅಭಿಯಾನದಡಿ ಇಂದು ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ವಿದ್ಯಾರ್ಥಿಗಳೊಂದಿಗೆ “ಯುವಸಂವಾದ” ಕಾರ್ಯಕ್ರಮ ಜರುಗಿತು. ಇದನ್ನೂ ಓದಿ : ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು 2025 ಅನ್ನು ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕಾರ್ಯಕ್ರಮವನ್ನು ಶ್ರೀ ರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ. ಕೃಷ್ಣಪ್ರಸಾದ್ ಕಾಯರ್ ಕಟ್ಟೆಯವರು ದೀಪ ಪ್ರಜ್ವಲನಗೈದು ಉಧ್ಘಾಟಿಸಿ ಶುಭಹಾರೈಸಿದರು. ಬಳಿಕ ನಡೆದ ಯುವಸಂವಾದದಲ್ಲಿ ಚಿಕ್ಕಮಗಳೂರಿನ ಯುವನಾಯಕರಾದ ಶ್ರೀ.ಪುಣ್ಯಪಾಲ್ ಜೆ ಯವರು ದೇಶದ ಪ್ರಸ್ತುತ ಆಗುಹೋಗುಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ಈ ಸಂಧರ್ಭ ವೇದಿಕೆಯಲ್ಲಿ ಶ್ರೀ ರಾಮ ಪದವಿಪೂರ್ವ ವಿದ್ಯಾಕೇಂದ್ರದ ಪ್ರಾಚಾರ್ಯರಾದ ಶ್ರೀ.ವಸಂತ ಬಲ್ಲಾಳ್, ಯುವಸಂವಾದ ಜಿಲ್ಲಾ ಸಂಯೋಜಕರಾದ ಶ್ರೀ. ಅವಿನಾಶ್ ಸುವರ್ಣ, ಜಿಲ್ಲಾ ನಾಯಕರಾದ ಶ್ರೀ. ಸುರೇಶ್ ಕೋಟ್ಯಾನ್ ನರಿಕೊಂಬು, ಶ್ರೀ. ದಿನೇಶ್ ಶೆಟ್ಟಿ ದಂಬೆದಾರ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿಕಸಿತ ಭಾರತ ಸಮಿತಿಯ ಪ್ರಮುಖರಾದ ಸಂಪತ್ ಕೋಟ್ಯಾನ್ ಕಡೇಶಿವಾಲಯ ಇವರು ಸ್ವಾಗತಿಸಿದರು. ಹಾಗು ಇನ್ನೋರ್ವ ಪ್ರಮುಖರಾದ ಹರಿಪ್ರಸಾದ್ ಭಂಡಾರಿಬೆಟ್ಟು ಇವರು ವಂದಿಸಿದರು.
ಸಂವಾದದಲ್ಲಿ ಪ್ರಮುಖರಾದ ಶ್ರೀ. ಅಶ್ವಿನ್ ಅಮೀನ್ , ಸಂದೀಪ್ ಕೆಲಿಂಜ, ಕೌಶಿಲ್ ಶೆಟ್ಟಿ , ಹೇಮಚಂದ್ರ ಶಂಭೂರು, ದೀಪಕ್ ಶೆಟ್ಟಿಗಾರ್, ಲತೀಶ್ ಕುರ್ಮಾನು ಹಾಗು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
