ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ರೀಲ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ (PM Modi reel)ಗಮನ ಸೆಳೆಯುತ್ತಿದೆ. ಪ್ರಾಣಿಗಳು ಮತ್ತು ಪಕ್ಷಿಗಳೊಂದಿಗೆ ಸಮಯ ಕಳೆಯುವ ಹಾಗೂ ಅವುಗಳಿಗೆ ಆಹಾರ ನೀಡುವ ವಿಡಿಯೋವನ್ನು ಮೋದಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : 🌾 ಯುವಜನತೆ ಕೃಷಿಯತ್ತ ಒಲವು ಬೆಳೆಸಿಕೊಳ್ಳಲಿ -ಶಾಸಕ ರಾಜೇಶ್ ನಾಯ್ಕ್
ವಿಡಿಯೋದಲ್ಲಿ ಮೋದಿ ಅವರು ತಮ್ಮ ನಿವಾಸದಲ್ಲಿ ಸಾಕಿರುವ ಆಕಳು ಮತ್ತು ನವಿಲುಗಳಿಗೆ ತಮ್ಮ ಕೈಯಾರೆ ಹುಲ್ಲು ಮತ್ತು ಕಾಳುಗಳನ್ನು ತಿನ್ನಿಸುತ್ತಿರುವುದು ಕಂಡುಬರುತ್ತದೆ. ಪ್ರಾಣಿಗಳೊಂದಿಗೆ ಅವರು ಆತ್ಮೀಯವಾಗಿ ಸಮಯ ಕಳೆಯುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.
ಈ ವಿಡಿಯೋಗೆ ಮೋದಿ ಅವರು Special, as always..! ಎಂದು ಕ್ಯಾಪ್ಶನ್ ನೀಡಿದ್ದಾರೆ. ಜೊತೆಗೆ ತಮ್ಮ ದಿನಚರಿಯಲ್ಲಿರುವ ಈ ಮುದ್ದಾದ ಕ್ಷಣದ ಬಗ್ಗೆಯೂ ಬರೆದುಕೊಂಡಿದ್ದಾರೆ.
ಪ್ರತಿದಿನ ಬೆಳಿಗ್ಗೆ ನನ್ನ ಸ್ನೇಹಿತರಿಗೆ ಊಟ ಹಾಕುವುದು ನನ್ನ ದಿನಚರಿ. ನಿನ್ನೆ ಬೆಳಿಗ್ಗೆ ನಾನು ಬೇಗನೆ ಹೊರಡುತ್ತಿದ್ದೇನೆಂದು ಅವರಿಗೆ ಹೇಗೋ ಗೊತ್ತಾಯಿತು. ಹಾಗಾಗಿ ಕೆಂಪುಕೋಟೆಗೆ ತೆರಳುವ ಮುನ್ನ ಅವುಗಳು ನನ್ನನ್ನು ಭೇಟಿಯಾಗಲು ಬಂದವು. ಯಾವಾಗಲೂ ವಿಶೇಷ! ಎಂದು ಮೋದಿ ಬರೆದುಕೊಂಡಿದ್ದಾರೆ.
