ಮುಂಬೈ: ಭಾರತೀಯ ವಾಯುಪಡೆ ಉದ್ಯೋಗಿಯೊಬ್ಬರ ಪತ್ನಿಗೆ ಡ್ರಗ್ಸ್ ನೀಡಿ, ಅತ್ಯಾಚಾರ ಎಸಗಿ, ಮತಾಂತರಕ್ಕೆ ಒತ್ತಾಯಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 16 ತಿಂಗಳ ಕಾಲ ವ್ಯವಸ್ಥಿತವಾಗಿ ಮಾದಕ ದ್ರವ್ಯ ನೀಡಿ, ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮದುವೆ ಮಾಡಿ ಬೇರೆ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ : Tumakuru | ತೋಟಕ್ಕೆ ವಾಕಿಂಗ್ ತೆರಳಿದ್ದ ವೃದ್ಧೆಯ ಭೀಕರ ಕೊಲೆ
ಅಯ್ಯಜ್ ತಾಜ್ ಮದರೆ (26) ಮತ್ತು ಆಮಿನ್ ಶೇಖ್ (30) ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಹಜರತ್ ಮೌಲಾನಾ ಎಂಬ ಧರ್ಮಗುರುವನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ನಗರದಲ್ಲಿ ಕೆಲಸ ಮಾಡುವ ಭಾರತೀಯ ವಾಯುಪಡೆಯ ಉದ್ಯೋಗಿಯನ್ನು ಮದುವೆಯಾಗಿರುವ ಮಹಿಳೆ ಜೂನ್ 12 ರಂದು ಎಫ್‌ಐಆರ್ ದಾಖಲಿಸಿದ್ದಾರೆ.
