‌ಬಂಟ್ವಾಳ:  ವಾಮದಪದವು ಸರಕಾರಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ವಾಮದಪದವು ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಸಹಕಾರದಿಂದ ಕಾಲೇಜ್ ಅಭಿವೃದ್ದಿ ಸಮಿತಿ ಶ್ರಮವಹಿಸಬೇಕು. ಇದನ್ನೂ ಓದಿ : ʻಕಾಂತಾರʼ ದೈವಕ್ಕೆ ಅಪಮಾನ – ಚಾಮುಂಡಿ ತಾಯಿ ಎದುರು ತಲೆಬಾಗಿ ರಣವೀರ್‌ ಸಿಂಗ್‌ ಕ್ಷಮೆಯಾಚನೆ

ಕಾಲೇಜಿನ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ತುರ್ತ ಕಾಮಗಾರಿಗಳ ಬಗ್ಗೆ ಶಾಸಕರ ನಿಧಿಯನ್ನು ಬಳಸಿಕೊಂಡು ನಡೆಸುವ ಭರವಸೆ ನೀಡಿದರು.

ಇದೇ ವೇಳೆ ಕಾಲೇಜಿನ ಆವರಣ ಗೋಡೆ ಕಾಮಗಾರಿಯ ಬಗ್ಗೆ ಹಾಗೂ ಅರ್ಧದಲ್ಲಿ ನಿಲ್ಲಿಸಲಾಗಿರುವ ಕಾಲೇಜಿನ ಸಭಾ ಭವನದ ಕಾಮಗಾರಿಯ ಬಗ್ಗೆ ಸಮಿತಿ ಸದಸ್ಯರು ಪ್ರಸ್ತಾಪವನ್ನು ಮಾಡಿದರು.

ಆಧ್ಯತೆಯ ನೆಲೆಯಲ್ಲಿ ಶೀಘ್ರವಾಗಿ ಮಾಡಬೇಕಾದ ಕೆಲಸಗಳನ್ನು ಮಾಡುವ ಭರವಸೆ ನೀಡಿದರು. ಕಾಲೇಜಿನ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ. ಜಿ ಮಹೇಶ್ ಪ್ರಸಾದ್ ,ಉಪನ್ಯಾಸಕರಾದ ಚಂದ್ರ, ಉದಯ್, ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ರವಿರಾಮ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಅನಂತ್ ಪೈ, ಶ್ರೀಧರ್ ಪೈ, ಆನಂದ್ ಆಚಾರ್ಯ, ಮೋಹನ್ ದಾಸ್ ಗಟ್ಟಿ, ರಾಜೀವ್ ಗಟ್ಟಿ, ಅಮ್ಮು ರೈ ಹರ್ಕಾಡಿ, ಪ್ರವೀಣ್ ಗಟ್ಟಿ, ವಿನಾಯಕ ಪ್ರಭು ಮತ್ತಿತರರು ಉಪಸ್ಥಿತರಿದ್ದರು.