ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಪ್ರಧಾನಿ ಮೋದಿ ‘ಹಾವಾಡಿಗ’ನಾಗಿ ಚಿತ್ರಿಸಿದ ನಾರ್ವೆ ಪತ್ರಿಕೆ – ಭಾರತೀಯರ ತೀವ್ರ ಆಕ್ರೋಶ

Posted by Bantwala Isiri News | May 20, 2026 | ಬಂಟ್ವಾಳ | 0 |

ಪ್ರಧಾನಿ ಮೋದಿ ‘ಹಾವಾಡಿಗ’ನಾಗಿ ಚಿತ್ರಿಸಿದ ನಾರ್ವೆ ಪತ್ರಿಕೆ – ಭಾರತೀಯರ ತೀವ್ರ ಆಕ್ರೋಶ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ‘ಸ್ನೇಕ್ ಚಾರ್ಮರ್’ (ಹಾವಾಡಿಗ) ರೂಪದಲ್ಲಿ ಬಿಂಬಿಸಿ ನಾರ್ವೆಯ (Norway) ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿರುವ ಕಾರ್ಟೂನ್ ಈಗ ಜಾಗತಿಕ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿರುದ್ದಂತೆ, ವಿದೇಶಿ ಮಾಧ್ಯಮದ ವಿರುದ್ಧ ಭಾರತೀಯರು (Indians) ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ : ಮೇ 20 ವಿಶ್ವ ಜೇನುನೊಣ ದಿನ

ವಿವಾದಾತ್ಮಕ ಕಾರ್ಟೂನ್‌ನಲ್ಲೇನಿದೆ?
ನಾರ್ವೆಯ ಅತ್ಯಂತ ಜನಪ್ರಿಯ ದಿನಪತ್ರಿಕೆಯಾದ ‘ಆಫ್ಟೆನ್‌ಪೋಸ್ಟನ್’ (Aftenposten) ಈ ಕಾರ್ಟೂನ್ ಅನ್ನು ಪ್ರಕಟಿಸಿದೆ. ಅದರಲ್ಲಿ ಪ್ರಧಾನಿ ಮೋದಿ ಅವರು ಹಾವಾಡಿಗನಂತೆ ಕುಳಿತು ‘ಪುಂಗಿ’ ಊದುತ್ತಿರುವಂತೆ ಚಿತ್ರಿಸಲಾಗಿದೆ. ಪುಂಗಿಯ ನಾದಕ್ಕೆ ತಕ್ಕಂತೆ ಬುಟ್ಟಿಯಿಂದ ಮೇಲೇಳುವ ಹಾವಿನ ಜಾಗದಲ್ಲಿ ‘ಪೆಟ್ರೋಲ್ ಬಂಕ್‌ನ ನೋಜಲ್’ ಅನ್ನು ತೋರಿಸಲಾಗಿದೆ.

ಭಾರತದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವ್ಯಂಗ್ಯ ಮಾಡಲು ಈ ಕಾರ್ಟೂನ್ ಬಳಸಿದೆ.
ಕೇವಲ ಕಾರ್ಟೂನ್ ಮಾತ್ರವಲ್ಲದೆ, ಅದರ ಜೊತೆ ಪ್ರಕಟವಾದ ಲೇಖನಕ್ಕೆ A clever yet annoying man (ಬುದ್ಧಿವಂತ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ) ಎಂಬ ವಿವಾದಾತ್ಮಕ ಶೀರ್ಷಿಕೆಯನ್ನು ನೀಡಲಾಗಿದೆ. ಇದು ಭಾರತೀಯರ ಕೆರಳಿಕೆಗೆ ಪ್ರಮುಖ ಕಾರಣವಾಗಿದೆ.
ಭಾರತೀಯರ ಆಕ್ರೋಶಕ್ಕೆ ಯಾಕೆ?

ಬ್ರಿಟಿಷರ ಕಾಲದಲ್ಲಿ ಭಾರತವನ್ನು ‘ಹಾವಾಡಿಗರ ಮತ್ತು ಮಾಟಮಂತ್ರಗಳ ದೇಶ’ ಎಂದು ಹೀಗಳೆಯಲಾಗುತ್ತಿತ್ತು. ಜಾಗತಿಕವಾಗಿ ಭಾರತ ಇಷ್ಟೊಂದು ಬೆಳೆದಿದ್ದರೂ, ವಿದೇಶಿ ಮಾಧ್ಯಮಗಳು ಇನ್ನೂ ಅದೇ ಹಳೇ ಮನಸ್ಥಿತಿಯಲ್ಲಿ ಭಾರತವನ್ನು ನೋಡುತ್ತಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ತಂತ್ರ ಅಭಿವ್ಯಕ್ತಿ ಅಥವಾ ವ್ಯಂಗ್ಯದ ಹೆಸರಿನಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ” ಎಂದು ಹಲವರು ಎಕ್ಸ್ (ಟ್ವಿಟರ್) ನಲ್ಲಿ ಆಕ್ಷೇಪ ಎತ್ತಿದ್ದಾರೆ.

ಭಾರತವು ಆರ್ಥಿಕ ಮತ್ತು ತಂತ್ರಜ್ಞಾನ ರಂಗದಲ್ಲಿ ಮುನ್ನುಗ್ಗುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಇಂತಹ ನಿರೂಪಣೆಗಳನ್ನು ಸೃಷ್ಟಿಸುತ್ತಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ವಿದೇಶಿ ಮಾಧ್ಯಮಗಳು ಭಾರತವನ್ನು ಈ ರೀತಿ ಲೇವಡಿ ಮಾಡುತ್ತಿರುವುದು ಇದೇ ಮೊದಲಲ್ಲ. 2014 ರಲ್ಲಿ ಭಾರತದ ‘ಮಂಗಳಯಾನ’ ಯಶಸ್ಸನ್ನು ಜೀರ್ಣಿಸಿಕೊಳ್ಳಲಾಗದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು, ಹಸುವಿನೊಂದಿಗೆ ಭಾರತೀಯ ರೈತನೊಬ್ಬ ‘ಎಲೈಟ್ ಸ್ಪೇಸ್ ಕ್ಲಬ್’ ಬಾಗಿಲು ತಟ್ಟುತ್ತಿರುವಂತೆ ಕಾರ್ಟೂನ್ ಬಿಡಿಸಿ ನಂತರ ಕ್ಷಮೆ ಕೇಳಿತ್ತು.

ಸ್ಪೇನ್‌ನ ಪ್ರಮುಖ ಪತ್ರಿಕೆಯೊಂದು 2022 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಇದೇ ರೀತಿಯ ‘ಹಾವಾಡಿಗ’ನ ಸಂಕೇತ ಬಳಸಿ ಚಿತ್ರಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು.

ಪ್ರಸ್ತುತ ನಾರ್ವೆ ಪತ್ರಿಕೆಯ ಈ ನಡೆಗೆ ಜಾಗತಿಕ ಮಟ್ಟದಲ್ಲಿ ಭಾರತೀಯ ಮೂಲದ ರಾಜತಾಂತ್ರಿಕರು ಹಾಗೂ ನೆಟ್ಟಿಗರು ‘ಬಾಯ್ಕಾಟ್ ನಾರ್ವೆ ಮೀಡಿಯಾ’ ಹ್ಯಾಶ್‌ಟ್ಯಾಗ್‌ಗಳ ಮೂಲಕ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದಾರೆ.

Share:

Rate:

Previousಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ
Nextಭಾರತ-ಇಟಲಿ ಸಂಬಂಧಗಳ ಕುರಿತು ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಜಂಟಿಯಾಗಿ ಸಂಪಾದಕೀಯ ಲೇಖನ ಬರೆದ ಪ್ರಧಾನಮಂತ್ರಿ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಫರಂಗಿಪೇಟೆ : ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧವಸ-ಧಾನ್ಯ ವಿತರಣಾ ಕಾರ್ಯಕ್ರಮ

ಫರಂಗಿಪೇಟೆ : ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧವಸ-ಧಾನ್ಯ ವಿತರಣಾ ಕಾರ್ಯಕ್ರಮ

5 May 2024

ಯೇನೆಪೋಯ ರಾಷ್ಟ್ರೀಯ ವಿಜ್ಞಾನ ದಿನಾಚರಣೆ – 2024

ಯೇನೆಪೋಯ ರಾಷ್ಟ್ರೀಯ ವಿಜ್ಞಾನ ದಿನಾಚರಣೆ – 2024

1 March 2024

ಬಿ.ಮೂಡ ವಾರ್ಷಿಕ ಪ್ರತಿಭಾ ದಿನಾಚರಣೆ

ಬಿ.ಮೂಡ ವಾರ್ಷಿಕ ಪ್ರತಿಭಾ ದಿನಾಚರಣೆ

14 December 2023

1 ಕೋಟಿ ಮೌಲ್ಯದ 2 ತಲೆ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನ – ಐವರು ಅರೆ‌ಸ್ಟ್‌

1 ಕೋಟಿ ಮೌಲ್ಯದ 2 ತಲೆ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನ – ಐವರು ಅರೆ‌ಸ್ಟ್‌

12 May 2026

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಬಸ್ಸ್ ನಲ್ಲಿ ಗುಪ್ತಾಂಗ ಪ್ರದರ್ಶಿಸಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ : ಉಪ್ಪಿನಂಗಡಿ ಮೂಲದ ಖಾಸಗಿ ಬಸ್‌ ಕಂಡಕ್ಟರ್ ಇರ್ಫಾನ್ ಬಂಧನ
    ಬಸ್ಸ್ ನಲ್ಲಿ ಗುಪ್ತಾಂಗ ಪ್ರದರ್ಶಿಸಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ : ಉಪ್ಪಿನಂಗಡಿ ಮೂಲದ ಖಾಸಗಿ ಬಸ್‌ ಕಂಡಕ್ಟರ್ ಇರ್ಫಾನ್ ಬಂಧನ
  • ಪ್ರಕೃತಿಯ ನಾಶ ಜಗತ್ತು ಸರ್ವನಾಶ: ನಾರಾಯಣ ಗುರುಗಳ ಸಂದೇಶ ನೆನಪಿಸಿದ – ದಿನೇಶ್ ಸುವರ್ಣ ರಾಯಿ
    ಪ್ರಕೃತಿಯ ನಾಶ ಜಗತ್ತು ಸರ್ವನಾಶ: ನಾರಾಯಣ ಗುರುಗಳ ಸಂದೇಶ ನೆನಪಿಸಿದ – ದಿನೇಶ್ ಸುವರ್ಣ ರಾಯಿ
  • ಸುಳ್ಯ: “ಅಧಿಕಾರ ಬಳಸಿಕೊಂಡು 2ನೇ ಮದುವೆಗೆ ಸಿದ್ಧತೆ”| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ
    ಸುಳ್ಯ: “ಅಧಿಕಾರ ಬಳಸಿಕೊಂಡು 2ನೇ ಮದುವೆಗೆ ಸಿದ್ಧತೆ”| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ಮೇಲೆ ಗಂಭೀರ ಆರೋಪ ಮಾಡಿದ ಪತ್ನಿ
  • ರೈತರು, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ
    ರೈತರು, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ
  • ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್‌
    ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್‌
  • 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಬಂಗಾಳ ಪೊಲೀಸರ ಎನ್‌ಕೌಂಟರ್‌ಗೆ ಆರೋಪಿ ಬಲಿ
    11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಬಂಗಾಳ ಪೊಲೀಸರ ಎನ್‌ಕೌಂಟರ್‌ಗೆ ಆರೋಪಿ ಬಲಿ
  • ಪಚ್ಪದ್ರಾ ರಿಫೈನರಿ ರಾಷ್ಟ್ರಕ್ಕೆ ಸಮರ್ಪಣೆ: ರಾಜಸ್ಥಾನದಲ್ಲಿ ಭಾರತದ ಮೊದಲ ಗ್ರೀನ್‌ಫೀಲ್ಡ್ ಸಮಗ್ರ ರಿಫೈನರಿ-ಪೆಟ್ರೋಕೆಮಿಕಲ್ ಸಂಕೀರ್ಣ ಉದ್ಘಾಟನೆ
    ಪಚ್ಪದ್ರಾ ರಿಫೈನರಿ ರಾಷ್ಟ್ರಕ್ಕೆ ಸಮರ್ಪಣೆ: ರಾಜಸ್ಥಾನದಲ್ಲಿ ಭಾರತದ ಮೊದಲ ಗ್ರೀನ್‌ಫೀಲ್ಡ್ ಸಮಗ್ರ ರಿಫೈನರಿ-ಪೆಟ್ರೋಕೆಮಿಕಲ್ ಸಂಕೀರ್ಣ ಉದ್ಘಾಟನೆ
  • ಮಾಣಿ : ಗ್ರಾಮ ಸಭೆಯಲ್ಲಿ ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಪಿಡಿಒ
    ಮಾಣಿ : ಗ್ರಾಮ ಸಭೆಯಲ್ಲಿ ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಪಿಡಿಒ
  • ಬಂಟ್ವಾಳ:  ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆ: ಎಸ್‌ಐಆರ್ ಕಾರ್ಯ ಯಶಸ್ವಿಗೆ ಬೂತ್ ಮಟ್ಟದಲ್ಲಿ ಶ್ರಮಿಸುವಂತೆ ಕರೆ
    ಬಂಟ್ವಾಳ: ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆ: ಎಸ್‌ಐಆರ್ ಕಾರ್ಯ ಯಶಸ್ವಿಗೆ ಬೂತ್ ಮಟ್ಟದಲ್ಲಿ ಶ್ರಮಿಸುವಂತೆ ಕರೆ
  • ರಾಜಸ್ಥಾನಕ್ಕೆ ಮಹತ್ವದ ಅಭಿವೃದ್ಧಿ ಕೊಡುಗೆ: ಪಚ್ಪದ್ರಾ ರಿಫೈನರಿ ಹಾಗೂ ಜೋಧ್ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
    ರಾಜಸ್ಥಾನಕ್ಕೆ ಮಹತ್ವದ ಅಭಿವೃದ್ಧಿ ಕೊಡುಗೆ: ಪಚ್ಪದ್ರಾ ರಿಫೈನರಿ ಹಾಗೂ ಜೋಧ್ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

Designed by Elegant Themes | Powered by WordPress

error: Content is protected !!