ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ *‘ಡೆನ್ನಾನ-ಡೆನ್ನನ 2026’*ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರೋಪ ಸಮಾರಂಭ
ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ತಾರನಾಥ ಪೂಜಾರಿ, ಅಖಿಲ ಭಾರತ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ ಇದರ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉದ್ಯಮಿಗಳಾದ ಪ್ರಕಾಶ್ ಕುಂಪಲ ಮತ್ತು ಸುದರ್ಶನ್ ಬಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ, ರಂಗಭೂಮಿ ನಿರ್ದೇಶಕ ವಿದ್ದು ಉಚ್ಚಿಲ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಶೋಭರಾಜ್ ಪಾವೂರು ಮತ್ತು ವಿದುಷಿ ನಿಷ್ಮಿತಾ ಕಾರಂದೂರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಇವರನ್ನು ಗೌರವಿಸಲಾಯಿತು.
ಬಹುಮಾನಗಳ ವಿವರ
ಚಾಂಪಿಯನ್ : ಕೂಳೂರು ಘಟಕ
ದ್ವಿತೀಯ : ಪಣಂಬೂರು-ಕುಳಾಯಿ ಘಟಕ
ತೃತೀಯ : ಉಡುಪಿ ಘಟಕ
ಚತುರ್ಥ : ಬೆಳ್ತಂಗಡಿ ಘಟಕ
ಪಂಚಮ : ಬೆಂಗಳೂರು ಘಟಕ
ತೀರ್ಪುಗಾರರ ಮೆಚ್ಚುಗೆ ಪುರಸ್ಕಾರ :
ಕೊಲ್ಯ, ಮಾಣಿ ಹಾಗೂ ಸುರತ್ಕಲ್ ಘಟಕಗಳು
ಅತ್ಯುತ್ತಮ ನಟ :
ಹರೀಶ್ ಕೋಟ್ಯಾನ್ (ಪಡುಬಿದ್ರಿ ಘಟಕ), ಲೇಖನ್ ಪೂಜಾರಿ (ಕೊಲ್ಯ ಘಟಕ)
ಅತ್ಯುತ್ತಮ ನಟಿ :
ನಯನಾ ಕೋಟ್ಯಾನ್ (ಕೂಳೂರು ಘಟಕ), ಮಂಜುಳಾ (ಪಣಂಬೂರು-ಕುಳಾಯಿ ಘಟಕ)
ತೀರ್ಪುಗಾರರ ವಿಶೇಷ ಪುರಸ್ಕಾರ :
ಚಾರ್ವಿ (ಬೆಂಗಳೂರು ಘಟಕ), ಆದ್ಯಾ (ಬೆಳ್ತಂಗಡಿ ಘಟಕ)
ಅತ್ಯುತ್ತಮ ಕವನ :
ಪ್ರಥಮ – ಲತೀಶ್ ಸಂಕೊಳಿಗೆ (ಕೊಲ್ಯ ಘಟಕ)
ದ್ವಿತೀಯ – ಗೀತಾ ವಸಂತ್ (ಕೂಳೂರು ಘಟಕ)
ಅತ್ಯುತ್ತಮ ಪ್ರಚಾರ ವಿಡಿಯೋ :
ಪ್ರಥಮ – ಕೂಳೂರು ಘಟಕ
ದ್ವಿತೀಯ – ಪಣಂಬೂರು-ಕುಳಾಯಿ ಘಟಕ
ಅತ್ಯುತ್ತಮ ನೃತ್ಯ : ಬೆಂಗಳೂರು ಘಟಕ
ಅತ್ಯುತ್ತಮ ಸಂದೇಶ : ಉಡುಪಿ ಘಟಕ
ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ದಿನೇಶ್ ಸುವರ್ಣ ರಾಯಿ ವಿಜೇತರ ಪಟ್ಟಿ ವಾಚಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಕೇಂದ್ರ ಸಮಿತಿಯ
ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ಕಾರ್ಯಕ್ರಮದ ಸಂಚಾಲಕರಾದ ಗೀತಾ ಜಗದೀಶ್ ಹಾಗೂ ಉದಯ ಪೂಜಾರಿ ಮೇನಾಡು ಉಪಸ್ಥಿತರಿದ್ದರು.
ಡೆನ್ನಾನ-ಡೆನ್ನನ ಪ್ರಧಾನ ಸಂಚಾಲಕರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಸ್ವಾಗತಿಸಿದರು. ಬಂಟ್ವಾಳ ಘಟಕದ ಸಾಂಸ್ಕೃತಿಕ ನಿರ್ದೇಶಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಧನ್ಯವಾದ ಸಲ್ಲಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.
