ಬಂಟ್ವಾಳ: ಶ್ರೀ ವೆಂಕಟರಮಣಸ್ವಾಮಿ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಪದವಿ ಕಾಲೇಜಿನಲ್ಲಿ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಆಚರಿಸಲಾಯಿತು. ಇದನ್ನೂ ಓದಿ : Yenepoya Medical college Hospital Deralakatte, Mangaluru. New Era In Cardiac Care: Keyhole Surgery for 73 Year old patient

ಕರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ವೆಂಕಟರಮಣಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ, ‘ಅಂಬೇಡ್ಕರ್ ಓರ್ವ ಮಹಾನ್ ಸಮಾಜ ಸುಧಾರಕನಾಗಿದ್ದು, ಭಾರತದ ಸಂವಿಧಾನವನ್ನು ಬರೆದು, ನವಭಾರತದ ನಿರ್ಮಾಣದಲ್ಲಿ ಇವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ’ ಎಂದರು. ದ್ವಿತೀಯ ಕಲಾಪದವಿಯ ಕು|ಸ್ಪೂರ್ತಿ ಅಂಬೇಡ್ಕರ್ ಜೀವನ ಸಾಧನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮAಚಿ ಮಾತನಾಡಿ ‘ಅಂಬೇಡ್ಕರ್ ಮಹಾಜ್ಞಾನಿಯಾಗಿದ್ದು, ಸಂವಿಧಾನ ಶಿಲ್ಪಿಯಾದ ಇವರು ಬರೆದ ಸಂವಿಧಾನವು ಪವಿತ್ರ ಹಾಗೂ ಮಾರ್ಗದರ್ಶಕ ಗ್ರಂಥವಾಗಿದ್ದು, ಇಡೀ ದೇಶದ ಭವಿಷ್ಯವನ್ನು ಇವರು ಇದರಲ್ಲಿ ದಾಖಲಿಸಿದ್ದು, ಸಮಾನತೆಯ ಹರಿಕಾರರಾಗಿರುವ ಇವರ ಜೀವನ, ವ್ಯಕ್ತಿತ್ವ ಎಲ್ಲಾ ಭಾರತೀಯರಿಗೂ ಆದರ್ಶ ಪ್ರಾಯವಾದುದೆಂದರು.

ಕಾರ್ಯಕ್ರಮದಲ್ಲಿ, ಬಂಟ್ವಾಳ ರಘರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ.ಪೂರ್ಣೆಶ್ವರಿ ಭಟ್ ಹಾಗೂ ಎಸ್.ವಿ.ಎಸ್. ಇಂಗ್ಲೀಷ್ ಮೀಡಿಯಮ್ ಸ್ಕೂಲ್, ವಿದ್ಯಾಗಿರಿ, ಬಂಟ್ವಾಳ, ಇದರ ಸಹಶಿಕ್ಷಕಿ, ಶ್ರೀಮತಿ. ಗಾಯತ್ರಿ ಯವರು ಪಾಲ್ಗೊಂಡಿದ್ದರು. ಡಾ.ಸುಯೋಗ ವರ್ಧನ್ ಡಿ.ಎಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರೆ, ಡಾ.ವಿನಯ್ ಕುಮಾರ್ ಸಿ ಧನ್ಯವಾದವಿತ್ತರು. ಕು|ಪ್ರಾಜ್ಞವಿ ಕಾರ್ಯಕ್ರಮ ನಿರೂಪಿಸಿದರು.