ರಾಯಚೂರು: ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿ (Sri Raghavendra Swamy Matha) ಮಂತ್ರಾಲಯ ರಾಯರ ಮಠದಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಮೂಲ ರಾಮದೇವರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ತೈಲ ಅಭ್ಯಂಗನ ನೆರವೇರಿಸಿದರು. ಇದೇ ವೇಳೆ ತುಳಸಿ ಪೂಜೆ, ಗೋ ಪೂಜೆ ಮಾಡಲಾಯಿತು. ಇದನ್ನೂ ಓದಿ : ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ – ಮೂಲ ರಾಮದೇವರಿಗೆ ತೈಲ ಅಭ್ಯಂಗನ
ಮಂತ್ರಾಲಯದ (Mantralayam) ಶ್ರೀ ಮಠದಲ್ಲಿ ಪ್ರಾಣದೇವರು, ರಾಯರು ಮತ್ತು ಇತರ ಬೃಂದಾವನಗಳಿಗೂ ತೈಲ ಅಭ್ಯಂಗನ ಮತ್ತು ಆರತಿಯನ್ನು ಅರ್ಪಿಸಲಾಯಿತು. ನಂತರ ಸುಬುಧೇಂದ್ರ ತೀರ್ಥ ಶ್ರೀಗಳಿಗೆ ತೈಲ ಅಭ್ಯಂಗನ ಹಾಗೂ ನಾರೀಕೃತ ನೀರಾಜನ ನೆರವೇರಿತು.
ಈ ವೇಳೆ ಶ್ರೀಗಳು ಎಲ್ಲಾ ಭಕ್ತರಿಗೆ ಹೊಸ ವರ್ಷದ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು. ಯುಗಾದಿ ಹಿನ್ನೆಲೆ ರಾಯರ ದರ್ಶನ ಪಡೆಯಲು ವಿವಿಧೆಡೆಯಿಂದ ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ.
