ಆರೋಗ್ಯ ನಿರ್ವಹಣೆಯಲ್ಲಿ ಪೋಷಣೆಯ ಸಮಗ್ರ ಮತ್ತು ಅಂತರಶಾಸ್ತ್ರೀಯ ದೃಷ್ಟಿಕೋನಗಳು

ಯೇನೆಪೊಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆ (YNYSCH), ಯೇನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ಯ ಘಟಕವು 15 ಡಿಸೆಂಬರ್ 2025 ರಂದು ಮಂಗಳೂರು, ನರಿಂಗಣದ ಆಯುಷ್ ಕ್ಯಾಂಪಸ್‌ನ YNYSCH ಸಭಾಂಗಣದಲ್ಲಿ “ಆಹಾರ ವಿಜ್ಞಾನ” ರಾಷ್ಟ್ರೀಯ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತು. ಇದನ್ನೂ ಓದಿ: ಕರ್ನಾಟಕ ರಾಜ್ಯ ಒಲಂಪಿಕ್‌ ಕ್ರೀಡಾಕೂಟ ನಡೆಯಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಭಾನುವಾರ ಪೂರ್ವಭಾವಿ ಸಭೆ

ಕಾರ್ಯಕ್ರಮಕ್ಕೆ ಡಾ. ಅಜಿತ್ ಕೆ ಅವರ ಸ್ವಾಗತ ಭಾಷಣದೊಂದಿಗೆ ಚಾಲನೆ ದೊರೆಯಿತು. ಅವರು ಸಮಗ್ರ ಆರೋಗ್ಯದಲ್ಲಿ ಆಹಾರ ವಿಜ್ಞಾನದ ಮಹತ್ವವನ್ನು ವಿವರಿಸಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಇಡ್ಡ್ಯ ಕರುಣಾ  ಸಾಗರ್, (ಸಂಶೋಧನಾ ಸಲಹೆಗಾರರು, ನಿಟ್ಟೆ ವಿಶ್ವವಿದ್ಯಾಲಯ) ಹಾಗೂ ಗೌರವಾನ್ವಿತ ಅತಿಥಿಯಾಗಿ ಶ್ರೀ ಆಸಿಂ ಸಯದ್ ಶೀರಾಜ್, (ಸಿಇಒ, ಯೇನೆಪೊಯ ಟೆಕ್ನಾಲಜಿ ಇಂಕ್ಯುಬೇಟರ್) ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪುನೀತ್ ರಾಘವೇಂದ್ರ, ಪ್ರಾಂಶುಪಾಲರು, YNYSCH ವಹಿಸಿದ್ದರು. ಡಾ. ಸುನಿತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮ್ಮೇಳನವನ್ನು ಆಯೋಜನಾ ಸಮಿತಿ ಯಶಸ್ವಿಯಾಗಿ ನಡೆಸಿಕೊಟ್ಟಿತು. ಕಾರ್ಯಕ್ರಮದ ಅಂತ್ಯದಲ್ಲಿ ಡಾ. ಅರ್ಪಿತ್ ಅವರು ವಂದನಾರ್ಪಣೆ ಸಲ್ಲಿಸಿದರು.