ಬಂಟ್ವಾಳ, ನ. 20: ಶಂಭೂರು ಗ್ರಾಮ ನೇತ್ರಾವತಿ ನದಿ ತಟದ ಪುಣ್ಯಕ್ಷೇತ್ರ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನ. 26 ರಂದು ಪೂರ್ವಾಶಿಷ್ಠ ಸಂಪ್ರದಾಯದಂತೆ ಷಷ್ಠಿ ಮಹೋತ್ಸವ ನಡೆಯಲಿದೆ ಎಂದು ಪ್ರಧಾನ ಅರ್ಚಕ ಕಲ್ಯಾಣಿ ಅಶ್ವಿನ್ ರಾವ್ ತಿಳಿಸಿದ್ದಾರೆ. ಜಿ-20 ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರನ್ನು ಭೇಟಿ
ನ. 25 ರಂದು ಪಂಚಮಿ ದಿನ ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, 6 ತೆಂಗಿನಕಾಯಿ ಗಣ ಹೋಮ, ಬೆಳಗ್ಗೆ ೧೧ ಗಂಟೆಗೆ ನಾಗತಂಬಿಲ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ಗಂಟೆಗೆ ಸಾರ್ವಜನಿಕ ಅನ್ನ ಪ್ರಸಾದ ವಿತರಣೆ. ಸಂಜೆ ಗಂಟೆ 8ಕ್ಕೆ ಪಂಚಮಿ ಪೂಜೆ ನಡೆಯುವುದು.
ಸಂಜೆ 6ಕ್ಕೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನ ಪೂರ್ಣೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯ ಚೌಕಿ ಪೂಜೆ,
ಸಂಜೆ 6.30 ರಿಂದ ರಾತ್ರಿ 12ರ ತನಕ ಕಾಲಮಿತಿ ಯಕ್ಷಗಾನ ಬಯಲಾಟ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ನಡೆಯಲಿದೆ.
ನ. 26 ಷಷ್ಠಿ ದಿನ ಬೆಳಗ್ಗೆ 9ರಿಂದ ಸಿಯಾಳ ಅಭಿಷೇಕ, ಪವಮಾನ ಪೂಜೆ, ನಾಗ ತಂಬಿಲ, ಮಧ್ಯಾಹ್ನ 12ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ನಡೆಯುವುದು.
ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಡಳಿತಾಧಿಕಾರಿ ಕೃಷ್ಣ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 6.30 ರಿಂದ ರಾತ್ರಿ 12ರ ತನಕ (ಕಾಲಮಿತಿ) ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಹಮ್ಮಿಕೊಳ್ಳಲಾಗಿದೆ.
