ಮೈಸೂರು ರಸ್ತೆಯಲ್ಲಿನ CAR ಪ್ರಧಾನ ಕಚೇರಿಯಲ್ಲಿ ನಡೆದ ಮಾಸಿಕ ಪೆರೇಡ್ ನಲ್ಲಿ ಬೆಂಗಳೂರು ನಗರ ಪೊಲೀಸ್ ತಂಡದ ಶ್ರದ್ಧೆ ಮತ್ತು ಶಿಸ್ತನ್ನು ಪ್ರದರ್ಶಿಸಲಾಯಿತು.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶ್ರೀ ಸೀಮಾಂತ್ ಕುಮಾರ್ ಸಿಂಗ್, IPS ಅವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ಇದನ್ನು ಓದಿ; ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಸಂವಾದ
ಪಥ ಸಂಚಲನದಲ್ಲಿ ನಗರದ ವಿವಿಧ ಪೊಲೀಸ್ ಘಟಕಗಳಿಂದ 10 ತುಕಡಿಗಳು ಭಾಗವಹಿಸಿದ್ದವು. ಈ ತುಕಡಿಗಳನ್ನು ಶ್ರೀ ಕೆ. ಪರಶುರಾಮ, IPS, DCP ವೈಟ್‌ಫೀಲ್ಡ್ ಅವರು ಮುನ್ನಡೆಸಿದರು.
ಇದಲ್ಲದೆ, ಕಳೆದ ತಿಂಗಳಲ್ಲಿ ಅವರ ಅತ್ಯುತ್ತಮ ಸೇವೆಗಾಗಿ ವಿವಿಧ ಹುದ್ದೆಗಳ 44 ಮಂದಿ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
7ನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪದ ಕಾರ್ಯಕ್ರಮವೂ ಜರುಗಿತು. ಅಲ್ಲಿ 39 ಮಂದಿ ಸಿಬ್ಬಂದಿ ಮತ್ತು ಕೆ9 ಶ್ವಾನದಳದವರ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಸನ್ಮಾನಿಸಲಾಯಿತು.
