ಬೆಂಗಳೂರಿನಲ್ಲಿ‌ ನಡೆದ ಫಿಬಾ ಏಷ್ಯಾ (ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ) ಅರ್ಧವಾರ್ಷಿಕ ಸಾಮಾನ್ಯ ಸಮಗ್ರ ಅಧಿವೇಶನವನ್ನು ಗೃಹ ಸಚಿವರಾದ ಡಾ| ಜಿ.ಪರಮೇಶ್ವರ್‌ ಅವರು   ಉದ್ಘಾಟಿಸಿದರು.
ಇದೇ ಸಂದರ್ಭ ಫಿಬಾ ಏಷ್ಯಾ ಅಧ್ಯಕ್ಷರಾದ ಡಾ. ಕೆ.ಗೋವಿಂದರಾಜ್ ಅವರ ‘ಬ್ಯಾಸ್ಕೆಟ್‌ಬಾಲ್ ಬಿಲೀವರ್’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ : ಬಿ. ಸಿ. ರೋಡ್ ಮೊಡಂಕಾಪು ಕಾರ್ಮೆಲ್ ಪದವಿ ಪೂರ್ವ ಕಾಲೇಜನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಈ ಸಂದರ್ಭದಲ್ಲಿ ಫಿಬಾ ಅಧ್ಯಕ್ಷರಾದ ಶೇಖ್ ಸೌದ್ ಅಲಿ ಅಲ್ ಥಾನಿ, ಫಿಬಾ ಕಾರ್ಯನಿರ್ವಾಹಕ ನಿರ್ದೇಶಕ ಹಗೋಪ್ ಖಾಜ್ರಿಯನ್, ಮಹಾಪ್ರಧಾನ ಕಾರ್ಯದರ್ಶಿ ಆ್ಯಂಡ್ರೀಯಾಸ್ ಝಗ್ಲಿಸ್ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳಾದ ಡಾ. ಹೆಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ, ಡಾ. ಶರಣ ಪ್ರಕಾಶ ಪಾಟೀಲ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ವಿವಿಧ ದೇಶಗಳ ಫಿಬಾ ಪ್ರತಿನಿಧಿಗಳು ಉಪಸ್ಥಿತರಿದ್ದರು.